ಬೆಂಗಳೂರು: ಕೆಅರ್ ಪುರಂ ರೇಲ್ವೇ ನಿಲ್ದಾಣದಲ್ಲಿ ವ್ಯಕ್ತಿಯನ್ನು ಸಾವಿನಿಂದ ಪಾರು ಮಾಡಿದ ರಕ್ಷಣಾ ದಳದ ಸಿಬ್ಬಂದಿ

ಬೆಂಗಳೂರು: ಕೆಅರ್ ಪುರಂ ರೇಲ್ವೇ ನಿಲ್ದಾಣದಲ್ಲಿ ವ್ಯಕ್ತಿಯನ್ನು ಸಾವಿನಿಂದ ಪಾರು ಮಾಡಿದ ರಕ್ಷಣಾ ದಳದ ಸಿಬ್ಬಂದಿ

TV9 Web
| Updated By: Digi Tech Desk

Updated on:Jul 16, 2022 | 12:41 PM

ರೇಲ್ವೇ ಪ್ರೊಟೆಕ್ಷನ್ ಫೋರ್ಸ್ ಕಾನ್ಸ್ಟೇಬಲ್ ಪ್ರದೀಪ್ ಮತ್ತು ಎ ಎಸ್ ಐ ರವಿ ಕೂಡಲೇ ಅವನಿದ್ದಲ್ಲಿಗೆ ಧಾವಿಸಿ ನಿಶ್ಚಿತ ಸಾವಿನಿಂದ ಅವನನ್ನು ಬದುಕಿಸುತ್ತಾರೆ

ಬೆಂಗಳೂರು: ಈ ದೃಶ್ಯ ನೋಡುತ್ತಿದ್ದರೆ ಮೈ ಜುಂ ಅನ್ನುತ್ತದೆ ಮಾರಾಯ್ರೇ. ಸಾವನ್ನು ಗೆದ್ದು ಬಂದವ ಅಂತ ಹೇಳ್ತೀವಲ್ಲ…. ಪ್ರಾಯಶಃ ಇದೇ ಇರಬಹುದು! ಬೆಂಗಳೂರಿನ ಕೆ ಅರ್ ಪುರಂ (KR Puram) ರೇಲ್ವೇ ನಿಲ್ದಾಣದಲ್ಲಿ ತನ್ನ ಎಡಭಾಗದಿಂದ ಟ್ರೈನೊಂದು ವೇಗವಾಗಿ ಬರುತ್ತಿರುವುದು ಕಾಣುತ್ತಿದ್ದರೂ ಹಳಿ (tracks) ದಾಟವ ಪ್ರಯತ್ನ ಮಾಡುತ್ತಾನೆ. ಟ್ರೈನು ಬರುತ್ತಿರುವುದನ್ನು ಗಮನಿಸಿ ಅತಂಕಗೊಂಡುಡ ವಾಪಸ್ಸು ಪ್ಲಾಟ್ಫಾರ್ಮ್ ಹತ್ತುವ ಪ್ರಯತ್ನ ಮಾಡುವಾಗ ಬಿದ್ದುಬಿಡುತ್ತಾನೆ. ರೇಲ್ವೇ ಪ್ರೊಟೆಕ್ಷನ್ ಫೋರ್ಸ್ ಕಾನ್ಸ್ಟೇಬಲ್ ಪ್ರದೀಪ್ (Pradeep) ಮತ್ತು ಎ ಎಸ್ ಐ ರವಿ ಕೂಡಲೇ ಅವನಿದ್ದಲ್ಲಿಗೆ ಧಾವಿಸಿ ನಿಶ್ಚಿತ ಸಾವಿನಿಂದ ಅವನನ್ನು ಬದುಕಿಸುತ್ತಾರೆ.

Published on: Jul 16, 2022 11:21 AM