Karnataka Assembly session; ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ 929 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ: ಸುರೇಶ್ ಬಾಬು
ಸುರೇಶ್ ಬಾಬು ಅವರಿಗೆ ಉತ್ತರ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಾಲ್ಯವಿವಾಹ ಪದ್ಧತಿಯನ್ನು ತಡೆಯುವ ಪ್ರಯತ್ನ ಮಾಡುತ್ತಿದೆ ಮತ್ತು ಅದೇ ಹಿನ್ನೆಲೆಯಲ್ಲಿ ನಿನ್ನೆ ಸದನದಲ್ಲಿ ಬಾಲ್ಯವಿವಾಹ ಮಸೂದೆಯನ್ನು ಮಂಡನೆ ಮಾಡಲಾಗಿದೆ. ಸುರೇಶ್ ಅವರು ಪತ್ರಿಕಾ ವರದಿ ಆಧರಿಸಿ ಅಂಕಿ ಅಂಶಗಳನ್ನು ನೀಡಿದ್ದಾರೆ, ಆದರೆ ತಮ್ಮ ಮಕ್ಕಳ ರಕ್ಷಣಾ ಸಮಿತಿ ನೀಡಿರುವ ಅಂಕಿ ಅಂಶಗಳು ಭಿನ್ನವಾಗಿವೆ ಎಂದು ಹೇಳಿದರು.
ಬೆಂಗಳೂರು, ಆಗಸ್ಟ್ 13: ವಿಧಾನಸಭಾ ಅಧಿವೇಶನದ ಮೂರನೇ ದಿನವಾಗಿರುವ ಇಂದು ಜೆಡಿಎಸ್ ಶಾಸಕ ಸಿಬಿ ಸುರೇಶ್ ಬಾಬು (CB Suresh Babu) ಅವರು ಬಹಳ ಮಹತ್ತರವಾದ ವಿಷಯಗಳನ್ನು ಸದನದ ಗಮನಕ್ಕೆ ತಂದು ಸಂಬಂಧಪಟ್ಟ ಸಚಿವರಿಂದ ಉತ್ತರ ಬಯಸಿದರು. ಅವರು ಹೇಳುವ ಪ್ರಕಾರ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದ್ದು ಇದು ಬಹಳ ಆಘಾತಕಾರಿ ಮತ್ತಿ ಕಳವಳಕಾರಿ ಅಂಶವೆಂದು ಹೇಳಿದರು. ಹಾಗೆಯೇ ರಾಜ್ಯದಲ್ಲಿ ಕಳೆದ 4 ತಿಂಗಳು ಆವಧಿಯಲ್ಲಿ 929 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದು ಮತ್ತಷ್ಟು ಗಂಭೀರವಾದ ವಿಷಯವಾಗಿದೆ ಎಂದ ಸುರೇಶ್ ಬಾಬು ಇವುಗಳನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಸಚಿವೆಯನ್ನು ಕೇಳಿದರು.
ಇದನ್ನೂ ಓದಿ: Karnataka Assembly Session: ರಾಜಣ್ಣ ವಜಾ; ಸಿದ್ದರಾಮಯ್ಯ ಕಾಲೆಳೆಯುವ ಪ್ರಯತ್ನ ಮಾಡಿದ ವಿಪಕ್ಷ ನಾಯಕರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
