Loading video

ಗೃಹಲಕ್ಷ್ಮಿ ಯೋಜನೆ ಹಣ ಚುನಾವಣೆ ಸಮಯದಲ್ಲಿ ಮಾತ್ರ ನೀಡುವ ಹಣ ಅಂತ ಪುನರ್ ನಾಮಕರಣ ಮಾಡಿ: ಸರವಣ

|

Updated on: Mar 20, 2025 | 11:47 AM

ಹೇಳಿದ ಸಮಯಕ್ಕೆ ಸರಿಯಾಗಿ ಹಣ ತಲುಪದಿದ್ದರೆ ಫಲಾನುಭವಿಗಳಿಗೆ ಬಹಳ ತೊಂದರೆಯಾಗುತ್ತದೆ, ಗೃಹಲಕ್ಷ್ಮಿ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲೇ ಅವರು ಹತ್ತಾರು ಕಮಿಟ್ಮೆಂಟ್​ಗಳನ್ನು ಮಾಡಿಕೊಂಡಿರುತ್ತಾರೆ. ಅದು ಮಕ್ಕಳ ಶಾಲಾ ಫೀ ಆಗಿರಬಹುದು ಟ್ಯೂಷನ್ ಫೀ ಆಗಿರಬಹುದು ಅಥವಾ ಬೇರೆ ಏನಾದರೂ ಕಾರಣವಾಗಿರಬಹುದು, ಹಣ ಟೈಮಿಗೆ ಸರಿಯಾಗಿ ಸಿಗದಿದ್ದರೆ ಸಮಸ್ಯೆಯಾಗುತ್ತದೆ ಎಂದು ಸರವಣ ಹೇಳಿದರು.

ಬೆಂಗಳೂರು,  ಮಾರ್ಚ್ 20: ವಿಧಾನ ಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಎಗ ಮಾತಾಡಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿಎ ಸರವಣ (TA Saravana) ಗೃಹಲಕ್ಷ್ಮಿ ಯೋಜನೆ ಅಡಿ ಸಿದ್ದರಾಮಯ್ಯ ಸರ್ಕಾರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಟ್ರಾನ್ಸ್​​ಫರ್ ಮಾಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿದರು. ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು 6ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಅಥವಾ ಚುನಾವಣಾ ಸಮಯದಲ್ಲಿ ಮಾತ್ರ ನೀಡುವ ಹಣದ ಯೋಜನೆ ಅಂತ ಪುನರ್ ನಾಮಕರಣ ಮಾಡಬೇಕೆಂದು ಸರವಣ ಗೇಲಿ ಮಾಡಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿಎಂ ಇಬ್ರಾಹಿಂ ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಅಲೆಯುವ ವ್ಯಕ್ತಿ, ಅದರೆ ಜೆಡಿಎಸ್ ನನ್ನ ರಕ್ತದಲ್ಲಿದೆ: ಟಿಎ ಸರವಣ, ಎಮ್ಮೆಲ್ಸಿ