Ploughing: 9 ಎಕರೆ ಜಮೀನು ಹರಗಿದ ಜೋಡೆತ್ತು, ಬಳಿಕ 36 ಕಿಮೀ ದೂರ ಓಡೋಡಿ ಬನಶಂಕರಿ ದೇವಿಯ ದರ್ಶನ ಪಡೆದವು!

| Updated By: ಸಾಧು ಶ್ರೀನಾಥ್​

Updated on: Aug 25, 2023 | 7:24 PM

ಬೆಳಗ್ಗೆ ತಂಪನೆಯ ವಾತಾವಾರಣದಲ್ಲಿ ಅಂದರೆ 5 ಗಂಟೆಗೆ ಈ ಜೋಡೆತ್ತುಗಳಿಂದ ಜಮೀನು ಹರಗಲು ಆರಂಭ ಮಾಡಿಸಲಾಯಿತು. ಮುಂದೆ ಅವು 7.30 ಗಂಟೆಗೆಲ್ಲಾ 9 ಎಕರೆ ಹರಗುವುದ ಮುಕ್ತಾಯಗೊಳಿಸಿದವು. ಅಷ್ಟೇ ಅಲ್ಲ; ಈ ವಿಶಿಷ್ಟ ಸಾಹಸದ ಬಳಿಕ ಬನಶಂಕರಿಗೆ (Goddess Banashankari) ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೂದಿನಗಡದಿಂದ 36 ಕಿ.ಮೀ. ದೂರದ ಬನಶಂಕರಿವರೆಗೂ ಜೋಡೆತ್ತುಗಳು ನಿರಂತರವಾಗಿ ಓಡಿಕೊಂಡು ಹೋಗಿದ್ದವು.

ಬಾಗಲಕೋಟೆ, ಆಗಸ್ಟ್​ 25: ಈಗ ಸಾಹಸಗಳ ಯುಗ. ರೈತ ತಾನಷ್ಟೇ ಅಲ್ಲ; ತನ್ನ ಜೀವನಸಾಥಿಗಳಾದ ಜಾನುವಾರುಗಳಿಂದಲೂ ಸಾಹಸ ಮಾಡಿಸುತ್ತಾನೆ. ಆಗಾಗ್ಗೆ ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಬೂದಿನಗಡ ಗ್ರಾಮದಲ್ಲೂ ಇಂತಹುದೇ ಸಾಹಸ ನಡೆದಿದೆ. ಜೋಡೆತ್ತುಗಳಿಂದ (Jodettu Pair of Ox) ಈ ಭರ್ಜರಿ ಸಾಹಸ ಕಂಡುಬಂದಿದ್ದು, ಅವು ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನು ಹರಗಿವೆ (Ploughing). ಅಂದರೆ ಜಮೀನು ಉತ್ತಿವೆ. ಭೀಮಪ್ಪ ಮಲ್ಲಪ್ಪ ವಾಲೀಕಾರ ಅವರಿಗೆ ಸೇರಿದ ಎತ್ತುಗಳು ಇವಾಗಿವೆ.

ಕನಿಷ್ಠ ಸಮಯದಲ್ಲಿ ಗರಿಷ್ಠ ಹೊಲ ಹರಗಿದ ಜೋಡಿ ಎತ್ತುಗಳು:

ಹೌದು ಬೆಳಗ್ಗೆ ತಂಪನೆಯ ವಾತಾವಾರಣದಲ್ಲಿ ಅಂದರೆ 5 ಗಂಟೆಗೆ ಈ ಜೋಡೆತ್ತುಗಳಿಂದ ಜಮೀನು ಹರಗಲು ಆರಂಭ ಮಾಡಿಸಲಾಯಿತು. ಮುಂದೆ ಅವು 7.30 ಗಂಟೆಗೆಲ್ಲಾ 9 ಎಕರೆ ಹರಗುವುದ ಮುಕ್ತಾಯಗೊಳಿಸಿದವು. ಅಷ್ಟೇ ಅಲ್ಲ; ಈ ವಿಶಿಷ್ಟ ಸಾಹಸದ ಬಳಿಕ ಬನಶಂಕರಿಗೆ (Goddess Banashankari) ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೂದಿನಗಡದಿಂದ 36 ಕಿ.ಮೀ. ದೂರದ ಬನಶಂಕರಿವರೆಗೂ ಜೋಡೆತ್ತುಗಳು ನಿರಂತರವಾಗಿ ಓಡಿಕೊಂಡು ಹೋಗಿದ್ದವು. ಬಳಿಕ ಮಂಗಳಗುಡ್ಡದ ಮಂಗಳಾದೇವಿಯ ದರ್ಶನವನ್ನೂ ಪಡೆದವು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ