AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಪತಿರಾಯ ಎಸ್ಕೇಪ್!

ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಪತಿರಾಯ ಎಸ್ಕೇಪ್!

Gopal AS
| Updated By: ಸಾಧು ಶ್ರೀನಾಥ್​|

Updated on:Aug 25, 2023 | 6:31 PM

Share

Madikeri: ವ್ಯಕ್ತಿಯೋರ್ವ ಕಟ್ಟಿಕೊಂಡ ಹೆಂಡ್ತಿಯನ್ನು ಬಿಟ್ಟು ಬೇರೆ ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ. ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯ ಸತೀಶ್ (45) ಪರಸ್ತ್ರಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಪತ್ನಿ ರೇಖಾ ದೂರು ನೀಡಿದ್ದಾರೆ. ಸತೀಶ್ ಸ್ವಂತ ಅಂಗಡಿ ಹೊಂದಿದ್ದು, ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಎಸ್ಕೇಪ್ ಆಗಿದ್ದಾನೆ

ಆಂಟಿ ಮೇಲೆ ಅಂಕಲ್​ಗೆ ಪ್ರೀತಿ.. ಪತ್ನಿಗೆ ಕೈಕೊಟ್ಟ ಪತಿ- ವಿವಾಹಿತ (Married Woman) ಮಹಿಳೆಯೊಂದಿಗೆ ಪತಿರಾಯ ಎಸ್ಕೇಪ್ – ಅಂಗಡಿಯಲ್ಲಿ ಕೆಲಸ ಮಾಡ್ತಿದ್ದವಳ ಜೊತೆ ಲವ್ವಿಡವ್ವಿ (illicit Relation) – ನಾಲ್ಕು ತಿಂಗಳ ಹಿಂದೆಯೇ ಪರಾರಿಯಾಗಿರೋ ಸತೀಶ್ – ಮೂರು ವರ್ಷದ ಮಗುವನ್ನೂ ಕರೆದೊಯ್ದ ಪತಿ – ಪತಿ ಸತೀಶ್​, ಮಗು ಇಲ್ಲದೆ ಪತ್ನಿಯ ಗೋಳಾಟ – ಮಡಿಕೇರಿ ( Madikeri) ನಗರದ ತ್ಯಾಗರಾಜ ಕಾಲೊನಿಯಲ್ಲಿ ಘಟನೆ – ವಿವಾಹಿತ ಮಹಿಳೆಯೊಂದಿಗೆ 45 ವರ್ಷದ ಸತೀಶ್ ಪರಾರಿ – ಪರಸ್ತ್ರಿಯ ಇಬ್ಬರೂ ಮಕ್ಕಳನ್ನೂ ಕರೆದೊಯ್ದಿರುವ ಸತೀಶ್ – ಮಡಿಕೇರಿ ನಗರ ಪೊಲೀಸ್ ಠಾಣೆಗೆ ಪತ್ನಿ ರೇಖಾ ದೂರು

ಇದರಿಂದ ಕಂಗಾಲಾದ ರೇಖಾ, ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಗಂಡ ಹಾಗೂ ಮಕ್ಕಳನ್ನು ಹುಡುಕಿಕೊಡಿ ಎಂದು ರೇಖಾ ಅಂಗಲಾಚಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣೆ ಪೊಲೀಸರು ಸತೀಶ್​​ನಿಗಾಗಿ ಹುಡುಕಾಟ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 25, 2023 06:31 PM