ಉತ್ತರ ಕನ್ನಡ: ಮನೆ ಮುಂದೆ ನಿಲ್ಲಿಸಿದ್ದ ಬೈಕ್​ನಲ್ಲಿ ಕಾಳಿಂಗ ಸರ್ಪ; ಇಲ್ಲಿದೆ ರಕ್ಷಣೆಯ ವಿಡಿಯೋ

ಉತ್ತರ ಕನ್ನಡ: ಮನೆ ಮುಂದೆ ನಿಲ್ಲಿಸಿದ್ದ ಬೈಕ್​ನಲ್ಲಿ ಕಾಳಿಂಗ ಸರ್ಪ; ಇಲ್ಲಿದೆ ರಕ್ಷಣೆಯ ವಿಡಿಯೋ

ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2023 | 5:54 PM

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶೇಜವಾಡ ಬಳಿ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಕಾಳಿಂಗ ಸರ್ಪವೊಂದು ಸೇರಿಕೊಂಡಿದೆ. ಇದನ್ನು ಗಮನಿಸಿದ ಮನೆಯವರು ಕೂಡಲೇ ಸ್ಥಳೀಯ ಉರಗ ರಕ್ಷಕ ಅನಿಲ್ ಪೂಕಾರಿ ಎಂಬುವವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅವರು, ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಉತ್ತರ ಕನ್ನಡ, ಆ.25: ಬೈಕ್​ ಸವಾರರೇ ಸ್ವಲ್ಪ ಎಚ್ಚರವಾಗಿರುವುದು ಉಳಿತು. ಹೌದು, ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಕಾಳಿಂಗ ಸರ್ಪವೊಂದು (King Cobra) ಸೇರಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಶೇಜವಾಡ ಬಳಿ ನಡೆದಿದೆ. ಮಂಜುನಾಥ ನಾಯ್ಕ ಎಂಬುವರಿಗೆ ಸೇರಿದ ಬೈಕ್​ನ ಹಿಂಬದಿಯ ಚೈನ್ ಪಾಕೇಟ್ ಬಳಿ ​ಸೇರಿಕೊಂಡಿದೆ. ಇದನ್ನು ಗಮನಿಸಿದ ಮನೆಯವರು ಕೂಡಲೇ ಸ್ಥಳೀಯ ಉರಗ ರಕ್ಷಕ ಅನಿಲ್ ಪೂಕಾರಿ ಎಂಬುವವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅವರು, ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಇನ್ನು ಉರಗ ರಕ್ಷಕ ಕಾಳಿಂಗ ಸರ್ಪ ರಕ್ಷಣೆಯ ರೋಚಕ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ