ಗದಗ: ನರಗುಂದ ಹೊರವಲಯದ ಡಾಬಾವೊಂದರಲ್ಲಿ ನಾಗರಹಾವು ಪ್ರತ್ಯಕ್ಷ, ಉರಗ ತಜ್ಞರಿಂದ ರಕ್ಷಣೆ

ಗದಗ: ನರಗುಂದ ಹೊರವಲಯದ ಡಾಬಾವೊಂದರಲ್ಲಿ ನಾಗರಹಾವು ಪ್ರತ್ಯಕ್ಷ, ಉರಗ ತಜ್ಞರಿಂದ ರಕ್ಷಣೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 25, 2022 | 1:35 PM

ಸ್ಥಳೀಯ ಉರಗ ತಜ್ಞ ಬಿ ಅರ್ ಸುರೆಬಾನ್ ಅವರಿಗೆ ಫೊನ್ ಮಾಡಿದಾಗ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಜಾಗ್ರತೆಯಿಂದ ಹಿಡಿದು ಸುರಕ್ಷಿತವಾದ ಸ್ಥಳವೊಂದಕ್ಕೆ ಒಯ್ದು ಬಿಟ್ಟಿದ್ದಾರೆ

ಗದಗ: ನಾಗರಹಾವುಗಳು (cobras) ಜನವಸತಿ ಪ್ರದೇಶಗಳಲ್ಲಿ ಪದೇಪದೆ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ ಮಾರಾಯ್ರೇ. ಗದಗ ಜಿಲ್ಲೆ ನರಗುಂದ (Nargund) ಪಟ್ಟಣದ ಹೊರವಲಯದಲ್ಲಿರುವ ಡಾಬಾವೊಂದರಲ್ಲಿ ಶುಕ್ರವಾರ ಬೆಳಗ್ಗೆ ಭಾರಿಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿ ಅಲ್ಲಿದ್ದ ಜನರಲ್ಲಿ ಭೀತಿ ಹುಟ್ಟಿಸಿದೆ. ಡಾಬಾದ ಮಾಲೀಕರು ಸ್ಥಳೀಯ ಉರಗ ತಜ್ಞ ಬಿ ಅರ್ ಸುರೆಬಾನ್ (BR Sureshban) ಅವರಿಗೆ ಫೊನ್ ಮಾಡಿದಾಗ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಜಾಗ್ರತೆಯಿಂದ ಹಿಡಿದು ಸುರಕ್ಷಿತವಾದ ಸ್ಥಳವೊಂದಕ್ಕೆ ಒಯ್ದು ಬಿಟ್ಟಿದ್ದಾರೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ