‘ಧುರಂಧರ್ 2’ Vs ‘ಟಾಕ್ಸಿಕ್’: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು

Edited By:

Updated on: Jan 08, 2026 | 4:12 PM

‘ಟಾಕ್ಸಿಕ್ ಸಿನಿಮಾವನ್ನು ಯಾರೂ ಟಚ್ ಮಾಡೋಕೆ ಆಗಲ್ಲ. ಈಗಾಗಲೇ ಎಷ್ಟೋ ಜನರು ಭಯಪಟ್ಟಿರುತ್ತಾರೆ’ ಎಂದು ಕೆ. ಮಂಜು ಅವರು ಹೇಳಿದ್ದಾರೆ. ಅಲ್ಲದೇ, ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಕಥೆ ಬೇರೆ ಆದ್ದರಿಂದ ಎರಡೂ ಸಿನಿಮಾಗಳು ಹಿಟ್ ಆಗುತ್ತವೆ ಎಂಬುದು ಕೆ. ಮಂಜು ಅವರ ಅಭಿಪ್ರಾಯ.

ನಿರ್ಮಾಪಕ ಕೆ. ಮಂಜು ಅವರು ಯಶ್ (Yash) ಜೊತೆ ‘ರಾಜಾಹುಲಿ’, ‘ಸಂತು ಸ್ಟ್ರೇಟ್ ಫಾರ್ವರ್ಡ್’ ಸಿನಿಮಾಗಳನ್ನು ಮಾಡಿದ್ದರು. ಈಗ ಯಶ್ ಬೆಳವಣಿಗೆಯನ್ನು ನೋಡಿ ಕೆ. ಮಂಜು ಖುಷಿಪಟ್ಟಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ (Toxic) ಹಾಗೂ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಆ ಕ್ಲ್ಯಾಶ್ ಬಗ್ಗೆ ಕೆ. ಮಂಜು ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಟಾಕ್ಸಿಕ್ ಸಿನಿಮಾವನ್ನು ಧುರಂಧರ್ ಚಿತ್ರಕ್ಕೆ ಹೋಲಿಸಬೇಡಿ. ಧುರಂದರ್ ಒಂದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ಟಾಕ್ಸಿಕ್ ಕೇವಲ ಭಾರತೀಯ ಸಿನಿಮಾ ಅಲ್ಲ. ಇದರ ಕಥೆ ಡಿಫರೆಂಟ್ ಆಗಿರುತ್ತದೆ. ಟಾಕ್ಸಿಕ್ ಮತ್ತು ಧರುಂದರ್ 2 ಕೂಡ ದೊಡ್ಡ ಹಿಟ್ ಆಗುತ್ತವೆ. ಟಾಕ್ಸಿಕ್ ಸಿನಿಮಾವನ್ನು 5 ಸಾವಿರದಿಂದ 6 ಸಾವಿರ ಚಿತ್ರಮಂದಿರಗಳಲ್ಲಿ ಹಾಕಬೇಕು ಅಂತ ಇದ್ದಾರೆ. ಒಂದೆರಡು ಸಾವಿರ ಚಿತ್ರಮಂದಿರ ಕಡಿಮೆ ಆಗಬಹುದು ಬಿಟ್ಟರೆ ಬೇರೆ ಏನೂ ಆಗಲ್ಲ. ಟಾಕ್ಸಿಕ್ ಖಂಡಿತಾ ಬಿಗ್ ಹಿಟ್ ಆಗುತ್ತದೆ’ ಎಂದು ಕೆ. ಮಂಜು (K Manju) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.