ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್ ಲೀಡರ್ ಎಂದ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ
ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಪ್ರಧಾನಿ ನರೇಂದ್ರ ಮೋದಿಯನ್ನು ಮಾಸ್ ಲೀಡರ್ ಎಂದು ಕರೆದಿದ್ದಾರೆ. ಇಂದಿರಾ ಗಾಂಧಿ ಅವರ ಬಳಿಕ ಮೋದಿಯವರೇ ಜನಪ್ರಿಯ ನಾಯಕ. ನಾನೇನು ಅವರನ್ನು ಹೊಗಳುತ್ತಿಲ್ಲ ಇರುವ ವಾಸ್ತವಾಂಶವನ್ನು ಹೇಳುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ ಬಗ್ಗೆ ಮೋದಿ ಹೇಳಿಕೆ ಸಂಬಂಧವೂ ಅವರು ಕಿಡಿ ಕಾರಿದ್ದಾರೆ.
ತುಮಕೂರು, ಮೇ 14: ಇಂದಿರಾ ಗಾಂಧಿ ಬಿಟ್ಟರೆ ಮಾಸ್ ಲೀಡರ್ ನರೇಂದ್ರ ಮೋದಿಯೇ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ. ನಾನು ಹೀಗೆ ಹೇಳಿರೋದನ್ನು ಕೇಳಿದರೆ ನಮ್ಮಲ್ಲಿ ಕೆಲವರ ಕಣ್ಣು ಕೆಂಪಾಗುತ್ತೆ. ನಾನೇನು ಅವರನ್ನು ಹೊಗಳುತ್ತಿಲ್ಲ ಇರುವ ವಾಸ್ತವಾಂಶವನ್ನು ಹೇಳುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ ಬಗ್ಗೆ ಮೋದಿ ಹೇಳಿಕೆ ಸಂಬಂಧ ಕಿಡಿ ಕಾರಿರುವ ರಾಜಣ್ಣ, ಸಿಎಂ ಕುರ್ಚಿ ಅಲುಗಾಡುತ್ತಿದೆಯೋ ಅಥವಾ ಇಲ್ಲವೋ ಅದು ನಮ್ಮ ಪಕ್ಷದ ವಿಚಾರ. ಸಿಎಂ ಸ್ಥಾನಕ್ಕೂ ಪ್ರಧಾನಿ ಮೋದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

