Chittapur RSS Pathsanchalan Live: ಚಿತ್ತಾಪುರದಲ್ಲಿ RSS ಪಥಸಂಚಲನ; ಲೈವ್ ನೋಡಿ
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇಂದು ಆರ್ಎಸ್ಎಸ್ ಪಥಸಂಚಲನ ನಡೆಯಿತು. ಬಜಾಜ್ ಕಲ್ಯಾಣ ಮಂಟಪದಿಂದ ಪಥಸಂಚಲನ ಶುರುವಾಗಿದೆ. ಕೇವಲ 300 ಗಣವೇಷಧಾರಿಗಳು ಮತ್ತು 50 ಬ್ಯಾಂಡ್ ವಾದಕರಿಗೆ ಅವಕಾಶ ನೀಡಲಾಗಿದೆ. ಸಂವಿಧಾನ ಗೆದ್ದಿದೆ, ನಾವು ಇಂದು ಪಥಸಂಚಲನ ಮಾಡುತ್ತಿದ್ದೇವೆ ಎಂದು ಗಣವೇಷಧಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಕಲಬುರಗಿ, ನವೆಂಬರ್ 16: ರಾಜ್ಯದ ಬಹುತೇಕ ಕಡೆ ಆರ್ಎಸ್ಎಸ್ ಪಥಸಂಚಲನಕ್ಕೆ ಅವಕಾಶ ಸಿಕ್ಕಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕಗ್ಗಂಟಾಗಿತ್ತು. ಇತ್ತೀಚೆಗೆ ಹೈಕೋರ್ಟ್ RSS ಪಥಸಂಚಲನಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ನೀಡಿತ್ತು. ಈ ಬೆನ್ನಲ್ಲೇ ಇಂದು ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಆರಂಭವಾಗಿದೆ. ಗಣವೇಷಧಾರಿಗಳು ಖುಷಿಯಿಂದ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. ಸಂವಿಧಾನ ಗೆದ್ದಿದೆ, ನಾವು ಇಂದು ಪಥಸಂಚಲನ ಮಾಡುತ್ತಿದ್ದೇವೆ ಎಂದು ಗಣವೇಷಧಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ತಾಪುರದಲ್ಲಿ RSS ಪಥಸಂಚಲನದ ನೇರಪ್ರಸಾರ ಇಲ್ಲಿದೆ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 16, 2025 03:53 PM
