ನಟನೆ ಮತ್ತು ಸೌಂದರ್ಯ ಎರಡರಲ್ಲೂ ಸಾಟಿಯಿಲ್ಲದ ಕಂಗನಾಗೆ ಹಸಿರು ಸೀರೆಗಳೆಂದರೆ ಪಂಚಪ್ರಾಣ; ತಲೈವಿ ಪ್ರಭಾವ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 10, 2021 | 1:31 AM

ಕಂಗನಾ ರಣಾವತ್ ಎಂಥ ಪ್ರತಿಭಾವಂತೆ ಎಂದರೆ, ವಯಸ್ಸು 34 ಆಗುವಷ್ಟರಲ್ಲಿ 4 ಬಾರಿ ರಾಷ್ಟ್ರಪ್ರಶಸ್ತಿ ಮತ್ತು 4 ಬಾರಿ ಫಿಲ್ಮ್ಫೇರ್ ಪ್ರಶಸ್ತಿ ಗೆದ್ದಿದ್ದಾರೆ! ಕಂಗನಾ ಕೇವಲ ಸೌಂದರ್ಯ ದೇವತೆ ಮಾತ್ರವಲ್ಲ, ಪ್ರತಿಭೆಯ ಭಂಡಾರ.

ಸಿನಿಮಾ ನಟ-ನಟಿಯರು ಆಫ್ ಕೋರ್ಸ್ ದುಡ್ಡು ಗಳಿಸುವುದನ್ನು ಇಷ್ಟಪಟುತ್ತಾರೆ ಅದರೆ ಅದರೊಂದಿಗೆ ತಮ್ಮ ವೃತ್ತಿಬದುಕಿನಲ್ಲಿ ಕನಿಷ್ಟ ಒಮ್ಮೆ ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿ ಗೆಲ್ಲುವ ತುಡಿತ ಇಟ್ಟುಕೊಂಡಿರುತ್ತಾರೆ. ಕಲಾವಿದರು ಯಾರೇ ಆಗಿರಲಿ, ರಿಕ್ಕಗ್ನಿಷನ್ ಬಯಸುತ್ತಾರೆ. ಪ್ರಶಸ್ತಿಗಳು ದೊರೆತಾಗಲೇ ಅವರ ಪ್ರತಿಭೆಗೆ ಮನ್ನಣೆ ಸಿಕ್ಕಂತೆ. ಎಲ್ಲ ಭಾಷೆಯ ನಟನಟಿಯರು ಬಯಸುವ ಅತ್ಯುನ್ನತ ಪಶಸ್ತಿ ಎಂದರೆ, ರಾಷ್ಟ್ರಪ್ರಶಸ್ತಿ ಅಥವಾ ನ್ಯಾಶನಲ್ ಅವಾರ್ಡ್. ಅನೇಕ ಕಲಾವಿದರು ತಮ್ಮ ವೃತ್ತಿಬದುಕಿನಲ್ಲಿ ಜನಪ್ರಿಯರೆನಿಸಿಕೊಂಡು ನೂರಾರು ಚಿತ್ರಗಳಲ್ಲಿ ನಟಿಸಿ ರಿಟೈರಾದರೂ ಒಮ್ಮೆಯೂ ರಾಷ್ಟ್ರಪ್ರಶಸ್ತಿ ಪಡೆದಿಲ್ಲ.

ಆದರೆ ಕಂಗನಾ ರಣಾವತ್ ಎಂಥ ಪ್ರತಿಭಾವಂತೆ ಎಂದರೆ, ವಯಸ್ಸು 34 ಆಗುವಷ್ಟರಲ್ಲಿ 4 ಬಾರಿ ರಾಷ್ಟ್ರಪ್ರಶಸ್ತಿ ಮತ್ತು 4 ಬಾರಿ ಫಿಲ್ಮ್ಫೇರ್ ಪ್ರಶಸ್ತಿ ಗೆದ್ದಿದ್ದಾರೆ! ಕಂಗನಾ ಕೇವಲ ಸೌಂದರ್ಯ ದೇವತೆ ಮಾತ್ರವಲ್ಲ, ಪ್ರತಿಭೆಯ ಭಂಡಾರ. ಆಕೆಯದ್ದು ಸಾಂಪ್ರದಾಯಿಕ ಚೆಲುವು ಎಂದು ಹೇಳುತ್ತಾರೆ. ಅದರೆ ಸಾಂಪ್ರದಾಯಿಕ ಉಡುಗೆಯಲ್ಲಿ ಆಕೆ ಎಷ್ಟು ಸುಂದರವಾಗಿ ಕಾಣುತ್ತಾರೋ ಮಾಡ್ ಮತ್ತು ಪಾಶ್ಚಾತ್ಯ ಉಡುಗೆಯಲ್ಲಿ ಅಷ್ಟೇ ಸೊಗಸಾಗಿ ಕಾಣುತ್ತಾರೆ. ಸುಮ್ಮನೆ ಕೂತು ತದೇಕ ದೃಷ್ಟಿಯಿಂದ ನೋಡುತ್ತಾ ಅಸ್ವಾದಿಸುವಂಥ ಚೆಲುವಿನ ಒಡತಿ ಆಕೆ.

ಇಲ್ಲಿರುವ ವಿಡಿಯೋನಲ್ಲಿ ಕಂಗನಾ ಅವರನ್ನು ನೋಡಿ. ಹಸಿರು ಬಣ್ಣದ ಸೀರೆಗಳಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಾರೆ. ಆಕೆ ಉಟ್ಟಿರುವ ಸೀರೆಗಳೆಲ್ಲ ಹಸಿರು ಬಣ್ಣದವು.

ಅಕೆಯ ಫೇವರಿಟ್ ಬಣ್ಣ ಗ್ರೀನ್ ಅಂತೆ, ಹಸಿರು ಬಣ್ಣದಲ್ಲಿ ಇಷ್ಟೆಲ್ಲ ವೆರೈಟಿಗಳಿವಯೇ ಅಂತ ಈ ವಿಡಿಯೊ ನೋಡಿದ ಮೇಲೆಯೇ ಗೊತ್ತಾಗೋದು. ಎಲೆ ಹಸಿರು, ತಿಳಿ ಹಸಿರು, ಹಚ್ಚ ಹಸಿರು, ಬಾಟಲಿ ಹಸಿರು, ಪಚ್ಚೆ ಹಸಿರು, ಆಲಿವ್ ಹಸಿರು-ಒಟ್ಟು 21 ಶೇಡ್ಗಳಿವೆಯಂತೆ ಹಸಿರಿನಲ್ಲಿ!!

ಇತ್ತೀಚಿನ ದಿನಗಳಲ್ಲಿ ಕಂಗನಾ ಪಾರ್ಟಿಗಳಿಗೆ ಹಸಿರು ಬಣ್ಣದ ಸೀರೆಗಳನ್ನೇ ಉಡುತ್ತಾರಂತೆ. ತಲೈವಿ (ದಿವಂಗತ ಜಯಲಲಿತಾ ಅವರ ಬಯೋಪಿಕ್) ಚಿತ್ರದ ಶೂಟಿಂಗ್ ಮುಗಿದ ಬಳಿಕ ಆಕೆಗೆ ಸೀರೆಗಳ ಮೇಲೆ ವ್ಯಾಮೋಹ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಈ ಚಿತ್ರ ಸೆಪ್ಟಂಬರ್ 10 ರಂದು ರಿಲೀಸ್ ಆಗುತ್ತಿದೆ.

ಇದನ್ನೂ ಓದಿ:  Viral Video: ಕಾರಿನಡಿ ಸಿಲುಕುತ್ತಿದ್ದ ಬಾಲಕನ ಜೀವ ಕಾಪಾಡಿದ ಪೌರ ಕಾರ್ಮಿಕ; ವಿಡಿಯೋ ವೈರಲ್