ಕೊರೊನಾ ಲಸಿಕೆ ಬಳಿಕ ಹೃದಯಾಘಾತದ ಭಯ? ಮಾತ್ರೆ ತೆಗೆದುಕೊಳ್ಳುವ ನಟ ಕೋಮಲ್
ಹಾಸನದಲ್ಲಿ ಹೃದಯಾಘಾತದ ಸುದ್ದಿ ಮತ್ತೆ ಮತ್ತೆ ಕೇಳಿಬರುತ್ತಿದೆ. ಆ ಬಗ್ಗೆ ನಟ ಕೋಮಲ್ ಕುಮಾರ್ ಮಾತನಾಡಿದ್ದಾರೆ. ‘ವ್ಯಾಕ್ಸಿನೇಷನ್ ಆದ ನಂತರ ಬಹಳಷ್ಟು ಜನರಿಗೆ ಏರುಪೇರು ಆಗಿದೆ. ಕೊರೊನಾದಿಂದ ನಾನು 24 ದಿನಗಳ ಕಾಲ ಐಸಿಯುನಲ್ಲಿ ಇದ್ದೆ. ಇಂದಿಗೂ ನಾನು ಬ್ಲಡ್ ಥಿನ್ನರ್ ಮಾತ್ರೆ ತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.
ಸಾಲು ಸಾಲು ಹೃದಯಾಘಾತದ (Heart Attack) ಸುದ್ದಿ ಕೇಳಿಬರುತ್ತಿದೆ. ಆ ಬಗ್ಗೆ ನಟ ಕೋಮಲ್ ಅವರು ಮಾತನಾಡಿದ್ದಾರೆ. ‘ವ್ಯಾಕ್ಸಿನೇಷನ್ ಆದಮೇಲೆ ಬಹಳಷ್ಟು ಜನರಿಗೆ ಏರುಪೇರು ಆಗಿದೆ. ನಾನು ಕೊರೊನಾದಿಂದ 24 ದಿನ ಐಸಿಯುನಲ್ಲಿ ಇದ್ದೆ. ನಾನು ಇಂದಿಗೂ ಬ್ಲಡ್ ಥಿನ್ನರ್ ಮಾತ್ರೆ ತೆಗೆದುಕೊಳ್ಳುತ್ತೇನೆ. ವಾಟ್ಸಪ್ನಲ್ಲಿ ಎಲ್ಲರೂ ಡಾಕ್ಟರ್ ಆಗಿದ್ದಾರೆ. ನಾವು ಸ್ವತಃ ಔಷಧಿ ತೆಗೆದುಕೊಳ್ಳಬಾರದು. ಡಾಕ್ಟರ್ ಭೇಟಿ ಮಾಡಿ ಸಲಹೆ ಪಡೆಯಬೇಕು. ಕೊರೊನಾ (Corona) ಬಂದವರಿಗೆ ಕ್ಲಾಟ್ ಆಗುತ್ತದೆ. ಅದನ್ನು ಸರಿ ಮಾಡದೇ ಇದ್ದರೆ ಹೃದಯಾಘಾತ, ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ. ಮುನ್ನೆಚ್ಚರಿಕೆಯಿಂದ ನಾನು ಮಾತ್ರೆ ತೆಗೆದುಕೊಳ್ಳುತ್ತೇನೆ’ ಎಂದು ಕೋಮಲ್ (Komal Kumar) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.