ಹೃದಯಾಘಾತ ಆಗುವುದಕ್ಕೂ ಮುನ್ನ ರಾಜು ತಾಳಿಕೋಟೆ ಸ್ಥಿತಿ ಹೇಗಿತ್ತು? ವಿವರಿಸಿದ ಶೈನ್ ಶೆಟ್ಟಿ
ಶೈನ್ ಶೆಟ್ಟಿ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಚಿತ್ರದ ಚಿತ್ರೀಕರಣದಲ್ಲಿ ಹಾಸ್ಯ ನಟ ರಾಜು ತಾಳಿಕೋಟೆ ಅಭಿನಯಿಸುತ್ತಿದ್ದರು. ಉಡುಪಿಯಲ್ಲಿ ಶೂಟಿಂಗ್ ನಡೆಯುತ್ತಿತ್ತು. ಹೃದಯಾಘಾತದಿಂದ ರಾಜು ತಾಳಿಕೋಟೆ ನಿಧನರಾದರು. ಆ ಕುರಿತು ಮಾಧ್ಯಮದ ಜೊತೆ ಶೈನ್ ಶೆಟ್ಟಿ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಶೂಟಿಂಗ್ನಲ್ಲಿ ಹಾಸ್ಯ ನಟ ರಾಜು ತಾಳಿಕೋಟೆ (Raju Talikote) ಅವರು ಅಭಿನಯಿಸುತ್ತಿದ್ದರು. ಉಡುಪಿಯಲ್ಲಿ ಶೂಟಿಂಗ್ ನಡೆಯುತ್ತಿತ್ತು. ಹೃದಯಾಘಾತದಿಂದ (Heart Attack) ರಾಜು ತಾಳಿಕೋಟೆ ಅವರು ನಿಧನರಾದರು. ಆ ಬಗ್ಗೆ ಮಾಧ್ಯಮದ ಜೊತೆ ಶೈನ್ ಶೆಟ್ಟಿ ಮಾತನಾಡಿದ್ದಾರೆ. ‘ಅಕ್ಟೋಬರ್ 10ರಿಂದ 3 ದಿನ ಅವರ ಜೊತೆ ನಾವು ಶೂಟಿಂಗ್ ಮಾಡಿದೆವು. ನಿನ್ನೆ ಶೂಟಿಂಗ್ ಮುಗಿಸಿ ಊಟ ಮಾಡಿದ ಬಳಿಕ ಅವರಿಗೆ ಉಸಿರಾಟದ ಸಮಸ್ಯೆ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಷ್ಟರಲ್ಲಾಗಲೇ ಅವರ ಪಲ್ಸ್ ರೇಟ್ ಕಡಿಮೆ ಆಯಿತು’ ಎಂದು ಶೈನ್ ಶೆಟ್ಟಿ (Shine Shetty) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 13, 2025 10:37 PM
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

