ಕೊಡಗಿನ ಬೆಡಗಿ ಅಶ್ವಿನಿ ಪೊನ್ನಪ್ಪ, ಸೈನಾ ಮತ್ತು ಸಿಂಧೂ ಅವರಿಗಿಂತ ಮೊದಲೇ ಬ್ಯಾಡ್ಮಿಂಟನ್ ಲೋಕದ ತಾರೆಯಾಗಿದ್ದರು
ಲುಕ್ಸ್ನಲ್ಲಿ ಯಾವುದೇ ಸಿನಿಮಾ ತಾರೆಗೆ ಕಮ್ಮಿಯಿರದ ಅಶ್ವಿನಿ ಹಲವಾರು ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಸ್ಪೋರ್ಟ್ಸ್ ಉಪಕರಣಗಳಿಗೆ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ.
ಸೋಮವಾರ ನಾವು ಜ್ವಾಲಾ ಗುಟ್ಟಾ ಅವರ ಬಗ್ಗೆ ಮಾತಾಡುವಾಗ ಹೈದರಾಬಾದಿನ ಮಹಿಳಾ ಕ್ರೀಡಾಪಟುಗಳ ಸಾಧನೆ ಮತ್ತು ಸೌಂದರ್ಯದ ಬಗ್ಗೆ ಚರ್ಚಿಸಿದ್ದೆವು. ಆದರೆ ಅದ್ಹೇಗೋ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ, ನಮ್ಮ ಕನ್ನಡದ ಕುವರಿ ಮತ್ತು ಕೊಡಗಿನ ಬೆಡಗಿ ಅಶ್ವಿನಿ ಪೊನ್ನಪ್ಪ ಮಚಿಮಾಂಡ ಅವರ ಹೆಸರು ಬಿಟ್ಟುಹೋಗಿತ್ತು. ಪ್ರಾಯಶಃ ಅವರು ಕನ್ನಡದವರು, ಬೆಂಗಳೂರನಲ್ಲಿ ನೆಲೆಸಿರಬಹುದು ಅನ್ನುವ ಕಾರಣಕ್ಕೆ ಮರೆತಿರಬಹುದು. ಅಶ್ವಿನಿ ಕನ್ನಡದವರಾದರೂ ಹೈದರಾಬಾದ್ನಲ್ಲಿ ನೆಲೆಸಿದ್ದಾರೆ ಮಾರಾಯ್ರೇ. 32-ವರ್ಷ ವಯಸ್ಸಿನ ಅಶ್ವಿನಿ ನಿಸ್ಸಂದೇಹವಾಗಿ ಭಾರತ ಕಂಡ ಅಪ್ರತಿಮ ಬ್ಯಾಡ್ಮಿಂಟನ್ ಆಟಗಾರ್ತಿ. ಸಿಂಗಲ್ಸ್ನಲ್ಲಿ ಅವರು ದೊಡ್ಡ ಸಾಧನೆಗಳನ್ನು ಮಾಡಲಿಲ್ಲವಾದರೂ ಡಬಲ್ಸ್ನಲ್ಲಿ ಅದರಲ್ಲೂ ವಿಶೇಷವಾಗಿ ಜ್ವಾಲಾ ಗುಟ್ಟ ಅವರೊಂದಿಗೆ ಸೇರಿ ಅನೇಕ ಪ್ರಶಸ್ತಿ ಮತ್ತು ಪದಕಗಳನ್ನು ಗೆದ್ದು ದೇಶದ ಕೀರ್ತಿಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿದವರು.
ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧೂ ಅವರು ಬ್ಯಾಡ್ಮಿಂಟನಲ್ಲಿ ಹೆಸರು ಮಾಡುವ ಮೊದಲೇ ಅಶ್ವಿನಿ ಈ ಕ್ರೀಡೆಯಲ್ಲಿ ದೊಡ್ಡ ತಾರೆಯೆನಿಸಿಕೊಂಡಿದ್ದರು. ಬ್ಯಾಡ್ಮಿಂಟನ್ ಮತ್ತು ಸೌಂದರ್ಯ ನಡುವೆ ಅವಿನಾಭಾವ ಸಂಬಂಧ ಇರುವಂತಿದೆ. 1982ರಲ್ಲಿ ಆಲ್-ಇಂಗ್ಲೆಂಡ್ ಚಾಂಪಿಯನ್ ಶಿಪ್ ಗೆದ್ದ ಮೊದಲ ಭಾರತೀಯ ಮತ್ತು ಕನ್ನಡಿಗ ಪ್ರಕಾಶ್ ಪಡುಕೋಣೆ ಸಹ ಸುಂದರಾಂಗ.
ನೆಹ್ವಾಲ್, ಸಿಂಧು, ಜ್ವಾಲಾ ಮತ್ತು ಅಶ್ವಿನಿ ಎಲ್ಲ ಸೌಂದರ್ಯವತಿಯರೇ. ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಗೆ ವಿದಾಯ ಹೇಳಿದ ನಂತರ ಅಶ್ವಿನಿ ಬ್ಯಾಡ್ಮಿಂಟನ್ ಪ್ರಿಮೀಯರ್ ಲೀಗ್ನಲ್ಲಿ ಟೀಮ್ ಬೆಂಗಳೂರನ್ನು ಪ್ರತಿನಿಧಿಸಿದರು.
ಲುಕ್ಸ್ನಲ್ಲಿ ಯಾವುದೇ ಸಿನಿಮಾ ತಾರೆಗೆ ಕಮ್ಮಿಯಿರದ ಅಶ್ವಿನಿ ಹಲವಾರು ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಸ್ಪೋರ್ಟ್ಸ್ ಉಪಕರಣಗಳಿಗೆ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಆಶ್ವಿನಿಯವರಿಗೆ ಪ್ರಾಣಿಗಳ ಮೇಲೆ ಅಪಾರ ಮಮತೆಯಿದ್ದು ಪೇಟಾ (PETA) ಪರವಾಗಿಯೂ ಕೆಲಸ ಮಾಡಿದ್ದಾರೆ.
ಉದ್ಯಮಿ ಮತ್ತು ಮಾಡೆಲ್ ಕರಣ್ ಮೇದಪ್ಪ ಅವರನ್ನು ಮದುವೆಯಾಗಿರುವ ಆಸ್ವಿನಿ ಪತಿಯೊಂದಿಗೆ ಹೈದರಾಬಾದ್ನಲ್ಲಿ ನೆಲೆಸಿದ್ದಾರೆ.