ಲೋಕಸಭಾ ಚುನಾವಣೆ ಸೋತ ಎಂ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!

Updated on: Jun 08, 2024 | 4:12 PM

ಗ್ಯಾರಂಟಿ ಯೋಜನೆ ನೀಡುವ ಮೂಲಕ ಜನರನ್ನು ಕಾಂಗ್ರೆಸ್ ಪಕ್ಷ ಖರೀದಿಸಿದೆಯೇ?ನಂತರ ತಮ್ಮ ಮಾತನ್ನು ಕೊಂಚ ಬದಲಾಯಿಸುವ ಲಕ್ಷ್ಮಣ್ ಎಲ್ಲರಿಗೂ ನಿಲ್ಲಿಸಬೇಕು ಅಂತ ಹೇಳುತ್ತಿಲ್ಲ, ಬಡವರಿಗೆ, ಕಡು ಬಡವರಿಗೆ ಮುಂದುವರಿಸಬೇಕು, ತಿಂಗಳಿಗೆ ₹ 25,000 ಆದಾಯ ಇರುವವರಿಗೆ ಯಾಕೆ ನೀಡಬೇಕು? ಕಾರುಗಳಲ್ಲಿ ಓಡಾಡವವರು ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಯಾಕೆ ಪಡೆಯಬೇಕು ಎಂದು ಲಕ್ಷ್ಮಣ್ ಕೇಳುತ್ತಾರೆ.

ಮೈಸೂರು: ಲೋಕಸಭಾ ಚುನಾವಣೆಗೆ ಮೊದಲು ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು (Guarantee schemes) ಹಾಡಿ ಹೊಗಳತ್ತಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ (M Laxman) ಈಗ ಅವುಗಳನ್ನು ನಿಲ್ಲಿಸಬೇಕು ಅಂತಿದ್ದಾರೆ! ಬಿಟ್ಟೀ ಭಾಗ್ಯಗಳನ್ನು ಕೊಟ್ಟು ರಾಜ್ಯದ ಜನರನ್ನು ಸೋಂಭೇರಿ ಮಾಡುತ್ತಿದ್ದೀರಿ ಎಂದು ಬಿಜೆಪಿ ನಾಯಕರು (BJP leader) ಹೇಳುತ್ತಿದ್ದುದನ್ನು ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಅನುಮೋದಿಸಿದ್ದಾರೆ. ಅವರಿಗೆ ಗ್ಯಾರಂಟಿ ಯೋಜನೆಗಳ ಅವಶ್ಯಕತೆಯಿಲ್ಲ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ. ಸಮಾಜದ ಉನ್ನತ ವರ್ಗಗಳ ಪೈಕಿ ಶೇಕಡ70ರಷ್ಟು ಜನ ಗ್ಯಾರಂಟಿ ಯೋಜನೆಗಳ ಲಾಭಾರ್ಥಿಗಳಾಗಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು. ಕಾಂಗ್ರೆಸ್ ವಕ್ತಾರನ ಲಾಜಿಕ್ ಅರ್ಥವಾಗಲ್ಲ ಮಾರಾಯ್ರೇ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಅಂತ ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ ಅಂತ ಹೇಳುತ್ತಾರೆ. ಅಂದರೆ ಗ್ಯಾರಂಟಿ ಯೋಜನೆಗಳನ್ನು ನೀಡಿರುವ ಕಾರಣಕ್ಕೆ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೇ? ಇದ್ಯಾವ ಸೀಮೆ ನ್ಯಾಯ ಸ್ವಾಮಿ? ಗ್ಯಾರಂಟಿ ಯೋಜನೆ ನೀಡುವ ಮೂಲಕ ಜನರನ್ನು ಕಾಂಗ್ರೆಸ್ ಪಕ್ಷ ಖರೀದಿಸಿದೆಯೇ?ನಂತರ ತಮ್ಮ ಮಾತನ್ನು ಕೊಂಚ ಬದಲಾಯಿಸುವ ಲಕ್ಷ್ಮಣ್ ಎಲ್ಲರಿಗೂ ನಿಲ್ಲಿಸಬೇಕು ಅಂತ ಹೇಳುತ್ತಿಲ್ಲ, ಬಡವರಿಗೆ, ಕಡು ಬಡವರಿಗೆ ಮುಂದುವರಿಸಬೇಕು, ತಿಂಗಳಿಗೆ ₹ 25,000 ಆದಾಯ ಇರುವವರಿಗೆ ಯಾಕೆ ನೀಡಬೇಕು? ಕಾರುಗಳಲ್ಲಿ ಓಡಾಡವವರು ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಯಾಕೆ ಪಡೆಯಬೇಕು ಎಂದು ಲಕ್ಷ್ಮಣ್ ಕೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಯತೀಂದ್ರ-ಸಿದ್ದರಾಮಯ್ಯ ಸಂಭಾಷಣೆ; ಮುಖ್ಯಮಂತ್ರಿ ಹೇಳಿಕೆ ಮತ್ತು ಎಂ ಲಕ್ಷ್ಮಣ್ ನೀಡುವ ಸ್ಪಷ್ಟನೆ ತಾಳೆಯಾಗುತ್ತವೆ!

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More