ಪೆಟ್ರೋಲ್ ಬೆಲೆ ಹೆಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರನ್ನು ವಂಚಿಸಿದೆ: ವಿ ಸೋಮಣ್ಣ, ಕೇಂದ್ರ ಸಚಿವ

|

Updated on: Jun 22, 2024 | 3:04 PM

ಆದರೆ ಕ್ಷೇತ್ರದ ಬುದ್ಧಿಜೀವಿಗಳು, ಬಡವರು ಮತ್ತು ಕಡುಬಡುವರು ತನ್ನ ಕೈಹಿಡಿದರು ಮತ್ತು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಂಘಟಿತ ಪರಿಶ್ರಮದಿಂದ ತಾನು ಗೆಲ್ಲುವುದು ಸಾಧ್ಯವಾಯಿತು ಎಂದು ಸೋಮಣ್ಣ ಹೇಳಿದರು. ಕನಿಷ್ಟ 15 ಸೀಟು ಗೆಲ್ಲುತ್ತೇವೆ ಎಂದಿದ್ದ ಕಾಂಗ್ರೆಸ್ ಕೇವಲ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು 19ಸೀಟುಗಳನ್ನು ಗೆದ್ದಿತು ಎಂದು ಕೆಂದ್ರ ಸಚಿವ ಹೇಳಿದರು.

ಬೆಂಗಳೂರು: ನೂತನ ಸಂಸದರಿಗೆ ಇಂದು ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ (felicitation programme) ಮಾತಾಡಿ ಕೇಂದ್ರ ಸಚಿವ ವಿ ಸೋಮಣ್ಣ (V Somanna), ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ (Siddaramaiah government) ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ, ಅದು ಇನ್ನೂ 3 ತಿಂಗಳು, 6 ತಿಂಗಳು ಅಥವಾ ಒಂದು ವರ್ಷ ಅಧಿಕಾರದಲ್ಲಿರುತ್ತದೋ ಇಲ್ಲವೋ ಅಂತ ಕುಮಾರಸ್ವಾಮಿಯವರು ಹೇಳಬೇಕು ಎಂದರು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿದ್ದಾರೆ, ಪೆಟ್ರೋಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ಸರ್ಕಾರ ಜನರನ್ನು ವಂಚಿಸಿದೆ ಎಂದ ಸೋಮಣ್ಣ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರೋದು ಕಾಂಗ್ರೆಸ್ ನಾಯಕರ ನಿದ್ದೆ ಹಾಳುಮಾಡಿದೆ ಎಂದರು. ತುಮಕೂರು ಲೋಕಸಭಾ ಕ್ಷೇತ್ರದಿಂದ ತಾನು ಸೋಲುತ್ತೇನೆ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ ಕ್ಷೇತ್ರದ ಬುದ್ಧಿಜೀವಿಗಳು, ಬಡವರು ಮತ್ತು ಕಡುಬಡುವರು ತನ್ನ ಕೈಹಿಡಿದರು ಮತ್ತು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಂಘಟಿತ ಪರಿಶ್ರಮದಿಂದ ತಾನು ಗೆಲ್ಲುವುದು ಸಾಧ್ಯವಾಯಿತು ಎಂದು ಸೋಮಣ್ಣ ಹೇಳಿದರು. ಕನಿಷ್ಟ 15 ಸೀಟು ಗೆಲ್ಲುತ್ತೇವೆ ಎಂದಿದ್ದ ಕಾಂಗ್ರೆಸ್ ಕೇವಲ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು 19ಸೀಟುಗಳನ್ನು ಗೆದ್ದಿತು ಎಂದು ಕೆಂದ್ರ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತುಮಕೂರು ಲೋಕಸಭಾ ಚುನಾವಣೆ 2024 ಫಲಿತಾಂಶ: ವಿ ಸೋಮಣ್ಣ ಗೆಲುವು, ರಾಜ್ಯದಿಂದ ರಾಷ್ಟ್ರ ರಾಜಕಾರಣದತ್ತ