ಚನ್ನಪಟ್ಟಣದಲ್ಲಿ ಲಂಚಗುಳಿತನ ತಾಂಡವಾಡುತ್ತಿದೆ ಅಂತ ಕುಮಾರಸ್ವಾಮಿಗೆ ಗೊತ್ತಾಗಲು ಶಿವಕುಮಾರ್ ಬಳಸಿದ ಟ್ರಿಕ್ ಹೇಗಿತ್ತು ಗೊತ್ತಾ?
ನಂತರ ಅವರಿಂದ ಮೈಕ್ ತೆಗೆದುಕೊಂಡು ಸಂಬಂಧಪಟ್ಟ ತಹಸೀಲ್ದಾರರೊಂದಿಗೆ ಮಾತಾಡಿದ ಶಿವಕುಮಾರ್ ಲಂಚಕ್ಕೆ ಡಿಮ್ಯಾಂಡ್ ಮಾಡುವ ಅಧಿಕಾರಿಗಳ ಪಟ್ಟಿ ಮಾಡಿ ಸಾಯಂಕಾಲದೊಳಗೆ ಅವರನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡುತ್ತಾರೆ.
ರಾಮನಗರ: ಚನ್ನಪಟ್ಟಣದಲ್ಲಿ ಇಂದು ಜನಸ್ಪಂದನ ಕಾರ್ಯಕ್ರಮ (Janaspandana Programme) ನಡೆಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜನರ ಅಹವಾಲುಗಳನ್ನು ಆಲಿಸುವಾಗ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಮಾಡಿದ ಅರೋಪಗಳನ್ನು ಕೇಳಿ ದಂಗಾದರು. ಅಧ್ಯಕ್ಷೆ ಮೊದಲು ನೇರವಾಗಿ ಶಿವಕುಮಾರ್ ಅವರೊಂದಿಗೆ ಮಾತಾಡಿದರು. ಆದರೆ ಡಿಸಿಎಂ ಒಂದು ಮೈಕ್ ತರಿಸಿ ಅದರಲ್ಲಿ ಎಲ್ಲರಿಗೆ ಕೇಳುವ ಹಾಗೆ ಹೇಳಿ ಅನ್ನುತ್ತಾರೆ. ಚನ್ನಪಟ್ಟಣದ ಶಾಸಕ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅಗಿದ್ದರಿಂದ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಾಗುವಂತೆ ಮಾಡೋದು ಶಿವಕುಮಾರ್ ಉದ್ದೇಶವಾಗಿತ್ತು. ಅಧ್ಯಕ್ಷೆ ಹೇಳುವುದೇನೆಂದರೆ ಪಂಚಾಯಿತಿಗಳಲ್ಲಿ ಲಂಚಗುಳಿತನ ತಾಂಡವಾಡುತ್ತಿದೆ, ಜನರು ಈ-ಖಾತೆ ಮಾಡಿಸಿಕೊಳ್ಳಲು ₹ 15-20 ಸಾವಿರ ಲಂಚ ಕಕ್ಕಬೇಕಂತೆ! ನಂತರ ಅವರಿಂದ ಮೈಕ್ ತೆಗೆದುಕೊಂಡು ಸಂಬಂಧಪಟ್ಟ ತಹಸೀಲ್ದಾರರೊಂದಿಗೆ ಮಾತಾಡಿದ ಶಿವಕುಮಾರ್ ಲಂಚಕ್ಕೆ ಡಿಮ್ಯಾಂಡ್ ಮಾಡುವ ಅಧಿಕಾರಿಗಳ ಪಟ್ಟಿ ಮಾಡಿ ಸಾಯಂಕಾಲದೊಳಗೆ ಅವರನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಡಿಕೆ ಶಿವಕುಮಾರ್ ಪಣ: ಚನ್ನಪಟ್ಟಣದಲ್ಲಿ ಸೋಲಿನಲ್ಲೂ ಗೆಲುವು ಹುಡುಕಿದ ಡಿಸಿಎಂ