ಸಂವಿಧಾನ ಬದಲಾವಣೆ ಮಾಡುವ ಮಾತಾಡಿದ್ದಕ್ಕೆ ಅನಂತಕುಮಾರ್ ಹೆಗಡೆ ದುಬಾರಿ ಬೆಲೆ ತೆತ್ತರು: ಅರವಿಂದ್ ಬೆಲ್ಲದ್

ಸಂವಿಧಾನ ಬದಲಾವಣೆ ಮಾಡುವ ಮಾತಾಡಿದ್ದಕ್ಕೆ ಅನಂತಕುಮಾರ್ ಹೆಗಡೆ ದುಬಾರಿ ಬೆಲೆ ತೆತ್ತರು: ಅರವಿಂದ್ ಬೆಲ್ಲದ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2024 | 8:07 PM

ಪತ್ರಕರ್ತರೊಬ್ಬರು, ಹೆಗಡೆಯವರು ಬಹಳ ವರ್ಷಗಳ ಹಿಂದೆಯೇ ಸಂವಿಧಾನ ಬದಲಾವಣೆ ಮಾತಾಡಿದ್ದರು, ಸುಮಾರು ಎರಡು ದಶಕಗಳ ಕಾಲ ಅವರ ಮೇಲೆ ಪಕ್ಷ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ, ಸಚಿವರಾಗಿ, ಸಂಸದರಾಗಿ ಮತ್ತು ಶಾಸಕನಾಗಿ ಸಂವಿಧಾನ ಮೇಲೆ ಪ್ರಮಾಣ ಮಾಡುತ್ತೀರಿ ಆದರೆ ನಂತರ ಅದನ್ನೇ ಬದಲಾಯಿಸುವ ಮಾತಾಡುತ್ತೀರಿ ಎಂದಾಗ ಬೆಲ್ಲದ್ ಉತ್ತರಕ್ಕಾಗಿ ತಡವರಿಸಿದರು.

ಧಾರವಾಡ: ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರು (Anant Kumar Hegde) ಸಂವಿಧಾ ಬದಲಾವಣೆ ಮಾಡುವ ಮಾತನ್ನು ಯಾವ ಕಾಂಟೆಕ್ಸ್ಟ್ ನಲ್ಲಿ ಹೇಳಿದ್ದರೋ ಗೊತ್ತಿಲ್ಲ, ಅದರೆ ಅವರು ಹಾಗೆ ಮಾತಾಡಿದ್ದಕ್ಕೆ ದೊಡ್ಡ ಬೆಲೆ ತೆರಬೇಕಾಯಿತು, ಅವರನ್ನು ಮಂತ್ರಿ ಸ್ಥಾನದಿಂದ ಸರಿಸಲಾಯಿತು ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Polls) ಅವರಿಗೆ ಟಿಕೆಟ್ ಕೂಡ ಪಕ್ಷ ನೀಡಲಿಲ್ಲ, ಅವರ ಹೇಳಿಕೆಯನ್ನು ಪಕ್ಷದ ನಾಯಕರೆಲ್ಲ ಖಂಡಿಸಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Arvind Bellad) ಹೇಳಿದರು. ನಗರದಲ್ಲಿಂದು ಮಾಧ್ಯಮ ಗೋಷ್ಠಿಯೊಂದರಲ್ಲಿ ಮಾತಾಡಿದ ಅವರು ಕಾಂಗ್ರೆಸ್ ನಾಯಕರು ಅದನ್ನು ಸುಖಾಸುಮ್ಮನೆ ದೊಡ್ಡ ಇಶ್ಶ್ಯೂ ಮಾಡಿದರು ಎಂದು ಹೇಳಿದರು. ಆದರೆ ಪತ್ರಕರ್ತರೊಬ್ಬರು, ಹೆಗಡೆಯವರು ಬಹಳ ವರ್ಷಗಳ ಹಿಂದೆಯೇ ಸಂವಿಧಾನ ಬದಲಾವಣೆ ಮಾತಾಡಿದ್ದರು, ಸುಮಾರು ಎರಡು ದಶಕಗಳ ಕಾಲ ಅವರ ಮೇಲೆ ಪಕ್ಷ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ, ಸಚಿವರಾಗಿ, ಸಂಸದರಾಗಿ ಮತ್ತು ಶಾಸಕನಾಗಿ ಸಂವಿಧಾನ ಮೇಲೆ ಪ್ರಮಾಣ ಮಾಡುತ್ತೀರಿ ಆದರೆ ನಂತರ ಅದನ್ನೇ ಬದಲಾಯಿಸುವ ಮಾತಾಡುತ್ತೀರಿ ಎಂದಾಗ ಬೆಲ್ಲದ್ ಉತ್ತರಕ್ಕಾಗಿ ತಡವರಿಸಿದರು. ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಮಾತಾಡುವುದು ತಪ್ಪಾಗುತ್ತದೆ, ನಮ್ಮ ಸಂವಿಧಾನದಲ್ಲಿ 106 ಬಾರಿ ಬದಲಾವಣೆಗಳನ್ನು ಮಾಡಲಾಗಿದೆ, ಅನುಚ್ಛೇದ 370 ಸಹ ಸಂವಿಧಾನದ ಭಾಗವಾಗಿತ್ತು ಎನ್ನುತ್ತಾರೆ. ತಿದ್ದುಪಡಿಗಳನ್ನು ಅವರು ಬದಲಾವಣೆಗಳು ಅಂತ ಹೇಳಿದ್ದು ಅರ್ಥವಾಗಲಿಲ್ಲ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಅರವಿಂದ ಬೆಲ್ಲದ್