ಲೋಕಸಭಾ ಸದಸ್ಯನಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹೆಚ್ ಡಿ ಕುಮಾರಸ್ವಾಮಿ

|

Updated on: Jun 24, 2024 | 12:46 PM

ಅವರು ತಮ್ಮ ಹೆಸರನ್ನು ಸಂಸತ್ತಿನ ಅಧಿಕಾರಿಯೊಬ್ಬರು ಕೂಗಿದ ಬಳಿಕ, ಮುಂದಿನ ಸಾಲಿನಲ್ಲಿ ಕುಳಿತಿದ್ದ ನಿತಿನ್ ಗಡ್ಕರಿ, ಅಮಿತ್ ಶಾ, ರಾಜನಾಥ ಸಿಂಗ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನಮಸ್ಕರಿಸುತ್ತಾ ಪೋಡಿಯಂ ಬಳಿ ನಡೆದುಹೋದರು.

ದೆಹಲಿ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ನೂತನ ಸಂಸತ್ ಭವನದಲ್ಲಿ ಇಂದು ಆರಂಭಗೊಂಡ ಲೋಕಸಭಾ ಅಧಿವೇಶನದಲ್ಲಿ (Parliament session) ಲೋಕಸಭಾ ಸದಸ್ಯನಾಗಿ (Member of Parliament) ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ತಮ್ಮ ಹೆಸರನ್ನು ಪೂರ್ತಿಯಾಗಿ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಅಂತ ಹೇಳುವ ಅವರು, ನಾನು ಲೋಕಸಭಾ ಸದಸ್ಯನಾಗಿ ಚುನಾಯಿತನಾಗಿ, ಕಾನೂನು ಮೂಲಕ ಸ್ಥಾಪಿಸಲ್ಪಟ್ಟಿರುವ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯುವೆನೆಂದು ಮತ್ತು ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವೆನೆಂದು ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಹೇಳಿದರು. ಅವರು ತಮ್ಮ ಹೆಸರನ್ನು ಸಂಸತ್ತಿನ ಅಧಿಕಾರಿಯೊಬ್ಬರು ಕೂಗಿದ ಬಳಿಕ, ಮುಂದಿನ ಸಾಲಿನಲ್ಲಿ ಕುಳಿತಿದ್ದ ನಿತಿನ್ ಗಡ್ಕರಿ, ಅಮಿತ್ ಶಾ, ರಾಜನಾಥ ಸಿಂಗ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನಮಸ್ಕರಿಸುತ್ತಾ ಪೋಡಿಯಂ ಬಳಿ ನಡೆದುಹೋದರು. ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕೆಗಳ ಸಚಿವರೂ ಆಗಿರುವ ಕುಮಾರಸ್ವಾಮಿಯವರು ಪ್ರಮಾಣ ವಚನ ಸ್ವೀಕರಿಸುವಾಗ ಸಾಂಪ್ರದಾಯಿಕ ಉಡುಗೆ-ಬಿಳಿ ಅಂಗಿ ಮತ್ತು ಪಂಚೆ ಧರಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅನಿವಾರ್ಯವಾಗಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ: ಚನ್ನಪಟ್ಟಣದಲ್ಲಿ ಹೆಚ್​​ಡಿ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?

Follow us on