ಚನ್ನಪಟ್ಟಣ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಅಭ್ಯರ್ಥಿನಾ ಅಥವಾ ಬಿಜೆಪಿ? ಕುಮಾರಸ್ವಾಮಿ ಜಾಣ್ಮೆಯ ಉತ್ತರ!

ನಿಮಗೆ ಗೊತ್ತಿರಬಹುದು, 2023 ರ ಅಸೆಂಬ್ಲಿ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಭಾರೀ ಸೋಲು ಅನುಭವಿಸಿದ್ದ ಬಿಜೆಪಿಯ ಸಿಪಿ ಯೋಗೇಶ್ವರ್ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಲು ಕಾತುರರಾಗಿದ್ದಾರೆ. ಕುಮಾರಸ್ವಾಮಿ ಮಾತುಗಳನ್ನು ಗಮನಿಸಿದರೆ ಅವರು ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಡುವ ಲಕ್ಷಣ ಕಾಣುತ್ತಿಲ್ಲ.

ಚನ್ನಪಟ್ಟಣ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಅಭ್ಯರ್ಥಿನಾ ಅಥವಾ ಬಿಜೆಪಿ? ಕುಮಾರಸ್ವಾಮಿ ಜಾಣ್ಮೆಯ ಉತ್ತರ!
|

Updated on: Jun 23, 2024 | 6:34 PM

ರಾಮನಗರ: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ (Channapatna Assembly by poll) ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುತ್ತಾರಾ ಅಥವಾ ಬಿಜೆಪಿ ಅಭ್ಯರ್ಥಿ? ಸಾಕಷ್ಟು ಗೊಂದಲ ಮೂಡಿಸಿರುವ ಈ ಪ್ರಶ್ನೆಗೆ ನಗರದಲ್ಲಿಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜಾಣ್ಮೆಯ ಉತ್ತರ ನೀಡಿದರು. ಈಗ್ಲೇ ಯಾಕಿಷ್ಟು ಅವಸರ? ಇನ್ನೂ ಚುನಾವಣೆ ದಿನಾಂಕ ಸಹ ಪ್ರಕಟವಾಗಿಲ್ಲ, ಒಮ್ಮೆ ಅದು ಪ್ರಕಟವಾಯಿತು ಅಂತಾದ್ರೆ ಬಿಜೆಪಿ ಮತ್ತು ತಮ್ಮ ಪಕ್ಷದ ಕಾರ್ಯಕರ್ತರು ಚರ್ಚೆ ನಡೆಸಿ ಒಮ್ಮತದ ಅಭ್ಯರ್ಥಿಯನ್ನು (consensus candidate) ಸ್ಪರ್ಧೆಗೆ ಇಳಿಸುತ್ತೇವೆ ಅಂತ ಕುಮಾರಸ್ವಾಮಿ ಹೇಳಿದರು. ನಿಮಗೆ ಗೊತ್ತಿರಬಹುದು, 2023 ರ ಅಸೆಂಬ್ಲಿ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಭಾರೀ ಸೋಲು ಅನುಭವಿಸಿದ್ದ ಬಿಜೆಪಿಯ ಸಿಪಿ ಯೋಗೇಶ್ವರ್ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಲು ಕಾತುರರಾಗಿದ್ದಾರೆ. ಕುಮಾರಸ್ವಾಮಿ ಮಾತುಗಳನ್ನು ಗಮನಿಸಿದರೆ ಅವರು ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಡುವ ಲಕ್ಷಣ ಕಾಣುತ್ತಿಲ್ಲ. ತಮ್ಮ ಪಕ್ಷದ ಅಸ್ತಿತ್ವದ ಬಗ್ಗೆ ಮಾತಾಡಿದ ಅವರು ಜೆಡಿಎಸ್ ಗೆ ಯಾವುದೇ ರೀತಿಯ ಆತಂಕವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮತದಾರರು ಇದನ್ನು ಸಾಬೀತು ಮಾಡಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ನಮ್ಮೊಂದಿಗಿದ್ದಾರೆ ಮತ್ತು ಜನರ ಅಶೀರ್ವಾದ ಪಕ್ಷದ ಮೇಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಒಂದೂವರೆ ವರ್ಷದಿಂದ ಚನ್ನಪಟ್ಟಣಕ್ಕೆ ಹೋಗಿರದ ಡಿಕೆ ಶಿವಕುಮಾರ್​ಗೆ ಈಗ ಮಮತೆ ಬಂದಿದೆ: ಕುಮಾರಸ್ವಾಮಿ ವ್ಯಂಗ್ಯ

Follow us