AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮೇಲಿನ ಸಿಟ್ಟಿನಿಂದ ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ ಆಕ್ಷೇಪ: ಹೆಚ್​ಡಿ ಕುಮಾರಸ್ವಾಮಿ

ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದಕ್ಕೂ ನನಗೂ ಯಾವ ಸಂಬಂಧವಿಲ್ಲ. ಆ ಕಂಪನಿ ಚಟುವಟಿಕೆ ಮುಂದುವರಿಸಲು ನಾನು ಸಹಿ ಹಾಕಿರುವುದು. 1738‌ ಕೋಟಿ ರೂ. ಅವಶ್ಯಕತೆ ಇದೆ, ಆ ಹಣವನ್ನು ಕ್ರೋಡೀಕರಿಸಬೇಕಲ್ಲ. ಆ ಒಪ್ಪಿಗೆಗೆ ನಾನು ಆ ಫೈಲ್ ಕಳುಹಿಸಿದ್ದೇನೆ ಎಂದರು.

ನನ್ನ ಮೇಲಿನ ಸಿಟ್ಟಿನಿಂದ ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ ಆಕ್ಷೇಪ: ಹೆಚ್​ಡಿ ಕುಮಾರಸ್ವಾಮಿ
ನನ್ನ ಮೇಲಿನ ಸಿಟ್ಟಿನಿಂದ ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ ಆಕ್ಷೇಪ: ಹೆಚ್​ಡಿ ಕುಮಾರಸ್ವಾಮಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on: Jun 23, 2024 | 5:13 PM

Share

ರಾಮನಗರ, ಜೂನ್​ 23: ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ (mining) ಅನುಮತಿ ನಿರಾಕರಣೆ ವಿಚಾರ ಸದ್ಯ ರಾಜ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಇನ್ನು ದೇವದಾರಿ ಬೆಟ್ಟದಲ್ಲಿ ಅದಿರು ಗಣಿಗಾರಿಕೆಗೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ (HD Kumaraswamy) ಒಪ್ಪಿಗೆ ಕೂಡ ನೀಡಿದ್ದಾರೆ. ಅವರ ವಿರುದ್ಧ ಪರಿಸರವಾದಿಗಳು ಕಿಡಿಕಾರಿದ್ದರು. ಈ ವಿಚಾರವಾಗಿ ಮಾತನಾಡಿರುವ ಹೆಚ್​ಡಿ ಕುಮಾರಸ್ವಾಮಿ, ನನ್ನ ಮೇಲಿನ ಸಿಟ್ಟಿನಿಂದ ಈ ರೀತಿ ಮಾಡಿಕೊಂಡು ಹೋಗುತ್ತಿದ್ದಾರೆ. ಜನರ ಮಧ್ಯೆ ನಾನೇ ಮಾಡಿರುವ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ನನ್ನಿಂದ ಹೊಸ ಮೈನಿಂಗ್ ಮಾಡುವ ಯಾವುದೇ ನಿರ್ಧಾರವಾಗಿಲ್ಲ

ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದಕ್ಕೂ ನನಗೂ ಯಾವ ಸಂಬಂಧವಿಲ್ಲ. ಆ ಕಂಪನಿ ಚಟುವಟಿಕೆ ಮುಂದುವರಿಸಲು ನಾನು ಸಹಿ ಹಾಕಿರುವುದು. 1738‌ ಕೋಟಿ ರೂ. ಅವಶ್ಯಕತೆ ಇದೆ, ಆ ಹಣವನ್ನು ಕ್ರೋಡೀಕರಿಸಬೇಕಲ್ಲ. ಅದಕ್ಕೆ ಅವರು ಎರಡು ಬ್ಯಾಂಕ್​ಗಳಲ್ಲಿ ಸಾಲ‌ ತೆಗೆದುಕೊಳ್ಳುತ್ತಿದ್ದಾರೆ. ಸಾಲ ಪಡೆಯಲು ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆಯಬೇಕು. ಆ ಒಪ್ಪಿಗೆಗೆ ನಾನು ಆ ಫೈಲ್ ಕಳುಹಿಸಿದ್ದೇನೆ ಎಂದರು.

ಇದನ್ನೂ ಓದಿ: ದೇವದಾರಿ ಹಿಲ್ಸ್​ನಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನಿರಾಕರಣೆ; ಗುತ್ತಿಗೆಗೆ ಸಹಿ ಹಾಕದಂತೆ ಈಶ್ವರ ಖಂಡ್ರೆ ಸೂಚನೆ

ನನ್ನಿಂದ ಹೊಸ ಮೈನಿಂಗ್ ಮಾಡುವ ಯಾವುದೇ ನಿರ್ಧಾರವಾಗಿಲ್ಲ. ಈಗ ಸೆಷನ್ ಶುರುವಾಗಿದೆ, ನಮ್ಮನ್ನೆಲ್ಲಾ ಆಹ್ವಾನ ಮಾಡಿದ್ದಾರಲ್ಲವೇ, ನಮ್ಮಿಂದ ಸಿಎಂ ಏನು ನಿರೀಕ್ಷೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಒಬ್ಬ ಸಚಿವರಾದರೂ ನನ್ನ ಬಳಿ ಚರ್ಚೆ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಒಡೆಯರ ಕಾಲದ ಬೆಂಗಳೂರು ನಾಶ ಮಾಡಿದ್ದಾರೆ

ಹಳೇ ಮೈಸೂರು ಭಾಗದಲ್ಲಿ ಹೊಸ ಇಂಡಸ್ಟ್ರಿ ತರುವ ವಿಚಾರವಾಗಿ ಮಾತನಾಡಿದ್ದು, ನಾನು ಮಂತ್ರಿಯಾಗಿ ಹದಿನೈದು ದಿನವಾಗಿದೆ. ಇಲಾಖೆಯ ವಿಷಯಗಳನ್ನು ಕ್ರೂಢಿಕರಿಸಿಕೊಳ್ಳಬೇಕು. ಎಂ ವಿಶ್ವೇಶ್ವರಯ್ಯ ಹಾಗೂ ಒಡೆಯರ ಕಾಲದಲ್ಲಿ ಕಟ್ಟಲಾದ ಸಂಸ್ಥೆಗಳು ಬೆಂಗಳೂರು ನಗರದಲ್ಲಿ ಎಲ್ಲವನ್ನೂ ನಾಶ ಮಾಡಿದ್ದಾರೆ. ನಾವೆಲ್ಲ ಸಣ್ಣ ಮಕ್ಕಳಿದ್ದಾಗ, ಐಟಿಐ ಇತ್ತು. ಎಚ್​ಎಎಲ್ ಇತ್ತು, ಎಚ್​ಎಮ್​ಟಿ ಇತ್ತು.

ಇದನ್ನೂ ಓದಿ: ಸಂಡೂರು ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ: ಮಾತು ತಪ್ಪಿದ ಆರೋಪಕ್ಕೆ ಕುಮಾರಸ್ವಾಮಿ ಸ್ಪಷ್ಟನೆ

ಬೆಳಿಗ್ಗೆ ಎಚ್​ಎಮ್​ಟಿ ಬಸ್ಸು, ಐಟಿಐ ಬಸ್ಸುಗಳು ಓಡಾತ್ತಿದ್ದವು. ಆದರೆ‌ ಇವತ್ತು ಆ ಸಂಸ್ಥೆಗಳು ಎಲ್ಲಿವೆ. ಕೋಟ್ಯಾಂತರ ಬೆಲೆ ಬಾಳುವ ಭೂಮಿ ಆಗಿನ ಸರಕಾರಗಳು ಮಾರಾಟ ಮಾಡಿದ್ದಾರೆ. ನಿನ್ನೆ ಮೂರುವರೆ‌ ಗಂಟೆ ಎಚ್​ಎಮ್​ಟಿ ಸಂಸ್ಥೆಯವರ ಜೊತೆ ಮಾತಾಡಿದೆ. ಸಂಸ್ಥೆಯ ಜಮೀನು ಮಾರಾಟ ಮಾಡಿ ವೇತನ ನೀಡುವ ಪರಿಸ್ಥಿತಿ ಇದೆ ಎಂದು ಹೇಳಿದರು.

ನಾನು ಸೈನ್​ ಮಾಡಿದೆ ಎಂಬ ಕಾರಣಕ್ಕೆ ಆ ಯೋಜನೆ ನಿಲ್ಲಿಸಲು ತೀರ್ಮಾನ

ವಿಶ್ವೇಶ್ವರಯ್ಯ ಸ್ಟೀಲ್ ಪ್ಲಾಂಟ್​ಗೂ ಹೊಸ ಜೀವ ಕೊಡಬೇಕಿದೆ. ದೇಶದಲ್ಲಿ ಬಿಡಿಭಾಗಗಳ ಉತ್ಪಾದನೆ ಮಾಡಬೇಕು ಅನ್ನೋದು ಪ್ರಧಾನಿಗಳ ಆಶಯ. ಬೇರೆ ದೇಶದಿಂದ ಇಂಪೋರ್ಟ್ ಮಾಡಿಕೊಂಡ್ರೆ ಫಾರಿನ್ ಎಕ್ಸ್​​ಚೇಂಜ್ ಹೊರೆ ನಮ್ಮ ಮೇಲೆ ಬೀಳುತ್ತೆ. ಕಿಯೋಸಿಸ್ ಯೋಜನೆ ಬಗ್ಗೆ ನಾನು ಮೊದಲ ಸೈನ್ ಹಾಕಿದೆ‌ ಅಂತ ಆ ಯೋಜನೆ ನಿಲ್ಲಿಸಬೇಕು ಎಂದು ನಿನ್ನೆ ತೀರ್ಮಾನ‌ ಮಾಡಿದ್ದಾರೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.