ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನಾನು ಯಾರಿಗೂ ಹೆದರಲ್ಲ: ಮಹೇಂದ್ರ ಕೆ ತಮ್ಮಣ್ಣನವರ್

ಲೋಕಸಭಾ ಚುನಾವಣೆ ಪ್ರಚಾರ ಸಮಯದಲ್ಲಿ ಸತೀಶ್ ಅವರು 2-3 ಸಭೆಗಳಿಗೆ ಕರೆದಿದ್ದರು, ಆಮೇಲೆ ಕರೆಯಲಿಲ್ಲ, ಆದಾಗ್ಯೂ ತಾನು ಕಾರ್ಯಕರ್ತರೊಂದಿಗೆ ಕೆಲಸ ಮಾಡಿ ಕುಡಚಿ ವಿಧಾನಸಭಾ ಕ್ಷೇತ್ರದಿಂದ ಪ್ರಿಯಾಂಕಾ ಅವರಿಗೆ 23,000 ಕ್ಕಿಂತ ಹೆಚ್ಚು ಮತಗಳ ಲೀಡ್ ದಕ್ಕುವಂತೆ ಮಾಡಿದೆ ಎಂದು ಮಹೇಂದ್ರ ಹೇಳಿದರು.

ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನಾನು ಯಾರಿಗೂ ಹೆದರಲ್ಲ: ಮಹೇಂದ್ರ ಕೆ ತಮ್ಮಣ್ಣನವರ್
|

Updated on: Jun 06, 2024 | 4:12 PM

ಚಿಕ್ಕೋಡಿ: ಕುಡಚಿಯ ಕಾಂಗ್ರೆಸ್ ಶಾಸಕ ಮಹೇಂದ್ರ ಕೆ ತಮ್ಮಣ್ಣನವರ್ (Mahendra K Tammannanavar) ಮತ್ತು ಈ ಭಾಗದ ಅತ್ಯಂತ ಪ್ರಭಾವಿ ನಾಯಕರೆನಿಸಿಕೊಂಡಿರುವ ಲೋಕೋಪಯೋಗಿ ಖಾತೆ ಸತೀಶ್ ಜಾರಕಿಹೊಳಿ (Satish Jarkiholi) ನಡುವೆ ಅದ್ಯಾವುದೋ ಕಾರಣಕ್ಕೆ ವೈಮನಸ್ಸು ತಲೆದೋರಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ (Chikkodi Lok Sabha seat) ಸತೀಶ್, ತಮ್ಮ ಮಗಳು ಪ್ರಿಯಾಂಕಾ ಜಾರಕಿಹೊಳಿಗಾಗಿ ಪ್ರಚಾರ ಮಾಡುವಾಗ ಸಚಿವ ಮತ್ತು ಶಾಸಕನ ನಡುವೆ ಭಿನ್ನಾಭಿಪ್ರಾಯ ತಲೆದೋರಿರಬಹುದು. ಸಚಿವರು ನಿಮ್ಮ ವಿರುದ್ಧ ಯಾಕೆ ಅಸಮಾಧಾಗೊಂಡಿದ್ದಾರೆ ಅಂತ ಕೇಳಿದರೆ ಮಹೇಂದ್ರ, ಕಾರಣ ತನಗೂ ಗೊತ್ತಿಲ್ಲ ಆದರೆ ತನ್ನ ವಿರುದ್ಧ ಯಾರೋ ಅವರ ಕಿವಿ ತುಂಬಿಸಿರಬಹುದು ಎನ್ನುತ್ತಾರೆ. ಚಿಕ್ಕೋಡಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಹೇಂದ್ರ, ಲೋಕಸಭಾ ಚುನಾವಣೆ ಪ್ರಚಾರ ಸಮಯದಲ್ಲಿ ಸತೀಶ್ ಅವರು 2-3 ಸಭೆಗಳಿಗೆ ಕರೆದಿದ್ದರು, ಆಮೇಲೆ ಕರೆಯಲಿಲ್ಲ, ಆದಾಗ್ಯೂ ತಾನು ಕಾರ್ಯಕರ್ತರೊಂದಿಗೆ ಕೆಲಸ ಮಾಡಿ ಕುಡಚಿ ವಿಧಾನಸಭಾ ಕ್ಷೇತ್ರದಿಂದ ಪ್ರಿಯಾಂಕಾ ಅವರಿಗೆ 23,000 ಕ್ಕಿಂತ ಹೆಚ್ಚು ಮತಗಳ ಲೀಡ್ ದಕ್ಕುವಂತೆ ಮಾಡಿದೆ ಎಂದು ಹೇಳಿದರು. ವೈಮನಸ್ಸು ಮುಂದುವರಿದರೆ ಮುಂದೇನು ಅಂತ ಕೇಳಿದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ತಾನು ಯಾರಿಗೂ ಹೆದರಲ್ಲ, ಅದೇ ನಿಷ್ಠೆಯೊಂದಿಗೆ ಮುಂದೆಯೂ ದುಡಿಯುತ್ತೇನೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ​ ಸೋಲಿಗೆ ಕಾರಣ ಕೊಟ್ಟ ಸತೀಶ್ ಜಾರಕಿಹೊಳಿ

Follow us