ಕೇಂದ್ರದಲ್ಲಿ ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ, ಕೊಡದಿದ್ದರೂ ಬೇಜಾರಿಲ್ಲ: ನಿಖಿಲ್ ಕುಮಾರಸ್ವಾಮಿ
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮೋಘ ಸಾಧನೆಗಳನ್ನು ಮಾಡಿದ್ದಾರೆ, ಇಡಿ ವಿಶ್ವವೇ ಭಾರತದೆಡೆ ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿರುವ ಅಭಿವೃದ್ಧಿಯ ಹರಿಕಾರ-ಅವರ ಸಾಧನೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಬೆಳೆಸಿದ್ದು, ಬೇಷರತ್ತಾಗಿ ಜೆಡಿಎಸ್ ಎನ್ ಡಿಎ ಮೈತ್ರಿಕೂಟದ ಸದಸ್ಯ ಪಕ್ಷವಾಗಿ ಸೇರಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಕೇಂದ್ರದಲ್ಲಿ ಸಚಿವ ಸ್ಥಾನ ಸಿಗಲಿದೆಯೇ? ಬಹಳಷ್ಟು ಕನ್ನಡಿಗರಲ್ಲಿ ಕುತೂಹಲ ಮೂಡಿಸಿರುವ ಪ್ರಶ್ನೆ ಇದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿಯ (Nikhil Kumaraswamy) ವರ್ಷನ್ ಕೊಂಚ ಡಿಫರೆಂಟ್ ಆಗಿದೆ. ಹೆಚ್ ಡಿ ದೇವೇಗೌಡರು (HD Devegowda) ಮತ್ತು ಕುಮಾರಸ್ವಾಮಿಯವರು ಬಿಜೆಪಿ ಜೊತೆ ಮೈತ್ರಿ ಮಾತುಕತೆ ನಡೆಸುವಾಗ ಯಾವುದೇ ಷರತ್ತನ್ನು ಅವರ ಮುಂದೆ ಇಟ್ಟಿರಲಿಲ್ಲ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮೋಘ ಸಾಧನೆಗಳನ್ನು ಮಾಡಿದ್ದಾರೆ, ಇಡಿ ವಿಶ್ವವೇ ಭಾರತದೆಡೆ ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿರುವ ಅಭಿವೃದ್ಧಿಯ ಹರಿಕಾರ-ಅವರ ಸಾಧನೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಬೆಳೆಸಿದ್ದು, ಬೇಷರತ್ತಾಗಿ ಜೆಡಿಎಸ್ ಎನ್ ಡಿಎ ಮೈತ್ರಿಕೂಟದ ಸದಸ್ಯ ಪಕ್ಷವಾಗಿ ಸೇರಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಈ ಹಿನ್ನೆಲೆಯಲ್ಲಿ ಕೇಂದ್ರದ ನಾಯಕರು ಕುಮಾರಸ್ವಾಮಿಯವರಿಗೆ ಯಾವುದಾದರೂ ಸ್ಥಾನಮಾನ ಕೊಟ್ಟರೆ ಸಂತೋಷದಿಂದ ಸ್ವೀಕರಿಸುತ್ತೇವೆ, ಕೊಡದೇ ಹೋದರೂ ಯಾವುದೇ ಬಗೆಯ ಅಸಮಧಾನ ತಳೆಯುವದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇಂದ್ರದಲ್ಲಿ ಕುಮಾರಸ್ವಾಮಿಯವರು ಮಂತ್ರಿಯಾಗುವ ಸುದ್ದಿ ಕೇವಲ ಊಹಾಪೋಹ: ನಿಖಿಲ್ ಕುಮಾರಸ್ವಾಮಿ