ಧಾವಂತದಲ್ಲಿ ದೆಹಲಿಗೆ ಹೊರಟ ಕುಮಾರಸ್ವಾಮಿ ಎನ್ ಡಿಎ ಮೈತ್ರಿಕೂಟವೇ ಸರ್ಕಾರ ರಚಿಸೋದು ಎಂದರು!

|

Updated on: Jun 05, 2024 | 11:24 AM

ಎನ್ ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ಸಭೆಯನ್ನು ಕರೆಯಲಾಗಿದೆ, ಅದರಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವುದಾಗಿ ವಿಮಾನ ನಿಲ್ದಾಣ ತಲುಪುವ ಧಾವಂತದಲ್ಲಿದ್ದ ಕುಮಾರಸ್ವಾಮಿ ಹೇಳಿದರು. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲು ಕಸರತ್ತು ನಡೆಸಿರುವ ಬಗ್ಗೆ ನಮ್ಮ ವರದಿಗಾರ ಹೇಳಿದಾಗ, ಅದು ಸಾಧ್ಯವಾಗಲ್ಲ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಸರ್ಕಾರವೇ ರಚನೆಯಾಗೋದು ಅಂತ ಹೇಳಿದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಿಗ್ ಕಂಬ್ಯಾಕ್ ಮಾಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಕತೆ ಮುಗೀತು ಅಂತ ಜನ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ನಾಯಕರು (Congress leaders) ಅಂದುಕೊಳ್ಳುತ್ತಿರುವಾಗಲೇ ಪಕ್ಷವನ್ನು ಅಮೋಘವಾದ ರೀತಿಯಲ್ಲಿ ಪುನಶ್ಚೇತನಗೊಳಿಸಿದ್ದಾರೆ. ಕೋಲಾರ ಕ್ಷೇತ್ರದಿಂದ (Kolar LS seat) ಅವರ ಪಕ್ಷದ ಅಭ್ಯರ್ಥಿ ಗೆದ್ದಿದ್ದು ಇದಕ್ಕೆ ಸಾಕ್ಷಿ. ಓಕೆ, ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಕುಮಾರಸ್ವಾಮಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಬುಲಾವ್ ಮೇರೆಗೆ ಇವತ್ತು ದೆಹಲಿಗೆ ತೆರಳಿದರು. ಎನ್ ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ಸಭೆಯನ್ನು ಕರೆಯಲಾಗಿದೆ, ಅದರಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವುದಾಗಿ ವಿಮಾನ ನಿಲ್ದಾಣ ತಲುಪುವ ಧಾವಂತದಲ್ಲಿದ್ದ ಕುಮಾರಸ್ವಾಮಿ ಹೇಳಿದರು. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲು ಕಸರತ್ತು ನಡೆಸಿರುವ ಬಗ್ಗೆ ನಮ್ಮ ವರದಿಗಾರ ಹೇಳಿದಾಗ, ಅದು ಸಾಧ್ಯವಾಗಲ್ಲ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಸರ್ಕಾರವೇ ರಚನೆಯಾಗೋದು ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭಾ ಚುನಾವಣೆ ಫಲಿತಾಂಶ; ಕುಮಾರಸ್ವಾಮಿ ನನ್ನನ್ನು ತಮ್ಮ ಪಕ್ಷದ ಅಭ್ಯರ್ಥಿಯಂತೆ ಭಾವಿಸಿ ಪ್ರಚಾರ ಮಾಡಿದರು: ಡಾ ಕೆ ಸುಧಾಕರ್