ಸರ್ಕಾರದ ಗ್ಯಾರಂಟಿ ಯೋಜನೆಗಳು ಬೇಕಿಲ್ಲವೆಂಬ ಸಂದೇಶವನ್ನು ಜನ ನೀಡಿದ್ದಾರೆ: ಹೆಚ್ ಸಿ ಬಾಲಕೃಷ್ಣ, ಶಾಸಕ

Updated on: Jun 05, 2024 | 5:39 PM

ಸರ್ಕಾರದ ಗ್ಯಾರಂಟಿ ಯೋಜನೆಗಳು ನಮಗೆ ಬೇಕಿಲ್ಲ ಎಂಬ ಸಂದೇಶವನ್ನು ಜನ ನೀಡಿದ್ದಾರೆ, ಹಾಗಾಗಿ ಅವುಗಳನ್ನು ಮುಂದುವರಿಸಬೇಕೋ ಬೇಡ್ವೋ ಅಂತ ತೀರ್ಮಾನ ತೆಗೆದುಕೊಳ್ಳುವಷ್ಟು ದೊಡ್ಡವ ತಾನಲ್ಲ, ಅದನ್ನು ಪಕ್ಷದ ಹಿರಿಯ ನಾಯಕರು ನಿರ್ಧರಿಸುತ್ತಾರೆ ಎಂದು ಹೇಳಿದರು.

ರಾಮನಗರ: ಲೋಕಸಭಾ ಚುನಾವಣೆಯಲ್ಲಿ (Lok Sabha Polls) ರಾಜ್ಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು (guarantee schemes) ಅಸ್ತ್ರವಾಗಿ ಬಳಸಿಕೊಂಡಿತು, ಅದರೆ ಅವು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ, ಚುನಾವಣಾ ರಾಜಕೀಯಲ್ಲಿ ಹೀಗಾಗುತ್ತದೆ, ಒಂದು ಪಟ್ಟು ಕೈಕೊಟ್ಟಿದೆ ಹಾಗಾಗಿ ಬೇರೆ ಪಟ್ಟಿನ ಬಗ್ಗೆ ಪಕ್ಷದ ಮುಖಂಡರು, ಶಾಸಕಾಂಗ ಪಕ್ಷದ ನಾಯಕರು ಪರಾಮರ್ಶೆ ನಡೆಸಲಿದ್ದಾರೆ ಎಂದು ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ (HC Balakrishna) ಹೇಳಿದರು. ತನ್ನ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ನಮಗೆ ಬೇಕಿಲ್ಲ ಎಂಬ ಸಂದೇಶವನ್ನು ಜನ ನೀಡಿದ್ದಾರೆ, ಹಾಗಾಗಿ ಅವುಗಳನ್ನು ಮುಂದುವರಿಸಬೇಕೋ ಬೇಡ್ವೋ ಅಂತ ತೀರ್ಮಾನ ತೆಗೆದುಕೊಳ್ಳುವಷ್ಟು ದೊಡ್ಡವ ತಾನಲ್ಲ, ಅದನ್ನು ಪಕ್ಷದ ಹಿರಿಯ ನಾಯಕರು ನಿರ್ಧರಿಸುತ್ತಾರೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಕ್ಕಲಿಗರು ಕಾಂಗ್ರೆಸ್ ಕೈ ಹಿಡಿಯಲಿಲ್ಲ ಅನ್ನೋದನ್ನು ತಿರಸ್ಕರಿಸಿದ ಬಾಲಕೃಷ್ಣ, ಸೋಲಿಗೆ ಒಂದು ಸಮುದಾಯವನ್ನು ಹೊಣೆ ಮಾಡೋದು ಸರಿಯಲ್ಲ, ಒಕ್ಕಲಿಗರು ವೋಟು ಹಾಕಿಲ್ಲ ಅಂತ ಹೇಗೆ ಹೇಳುತ್ತೀರಿ, ಅಹಿಂದ ಸಮುದಾಯಗಳು ವೋಟು ಹಾಕದಿರುವ ಸಾಧ್ಯತೆಯೂ ಇರುತ್ತದೆ, ಡಾ ಮಂಜುನಾಥ್ ಕ್ಷೇತ್ರದಲ್ಲ್ಲಿ ಹೊಸಮುಖ ಮತ್ತು ವೈದ್ಯರು, ಅವರಿಂದ ತಮಗೆ ಪ್ರಯೋಜನವಾದೀತು ಅಂತ ಮತದಾರರು ಭಾವಿಸಿರಬಹುದು ಎಂದು ಬಾಲಕೃಷ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಲೋಕಸಭಾ ಚುನಾವಣೆ ಫಲಿತಾಂಶ: ಹೊರಗಿನವ ಅಂತ ಟೀಕಿಸಿದ ಕಾಂಗ್ರೆಸ್ ನಾಯಕರಿಗೆ ಜನರೇ ತಕ್ಕ ಉತ್ತರ ನೀಡಿದ್ದಾರೆ: ಜಗದೀಶ್ ಶೆಟ್ಟರ್

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More