ಲೋಕಸಭಾ ಚುನಾವಣೆ ಫಲಿತಾಂಶ: ಕಾರ್ಯಕರ್ತರೊಂದಿಗೆ ಗೆಲುವಿನ ಸಂಭ್ರಮ ಆಚರಿಸಿದ ವಿಜಯೇಂದ್ರ, ರವಿ ಮತ್ತು ಅಶೋಕ
ಲೋಕಸಭಾ ಚುನಾವಣೆಯ ಎಲ್ಲ ಫಲಿತಾಂಶಗಳು ಹೊರಬಿದ್ದ ಬಳಿಕ ಬಿಜೆಪಿ ಕಚೇರಿ ಮುಂಭಾಗದಲ್ಲಿ ಅಶೋಕ, ವಿಜಯೇಂದ್ರ ಮತ್ತು ಸಿಟಿ ರವಿ ಸಾವಿರಾರು ಕಾರ್ಯಕರ್ತರೊಂದಿಗೆ ಸಂಭ್ರಮ ಆಚರಿಸಿದರು. ಬ್ಯಾಂಡು ಬಾಜಾದ ಸದ್ದಿಗೆ ಕಾರ್ಯಕರ್ತರೇನೋ ಕುಣಿಯುತ್ತಿದ್ದರು, ಅದರೆ ಈ ಮೂವರು ಮಾತ್ರ ಕುಣಿಯಲೊಲ್ಲರು, ಕೊನೆಗೆ ಅವರ ಆಗ್ರಹಕ್ಕೆ ಮಣಿದು ವಿಜಯೇಂದ್ರ ಎರಡೂ ಕೈ ಮೇಲೆತ್ತಿ ಚಪ್ಪಾಳೆ ಬಾರಿಸುತ್ತಾ ಮೈಯನ್ನು ಒಂದರೆಕ್ಷಣ ಟ್ವಿಸ್ಟ್ ಮಾಡಿದರು.
ಬೆಂಗಳೂರು: ಬಿಜೆಪಿ ನಾಯಕರು ವಿಕ್ಟರಿ ಮಾರ್ಚ್ (victory march) ಡಿಸರ್ವ್ ಮಾಡುತ್ತಾರೆ. ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಮತ್ತು ಇವತ್ತು ಫಲಿತಾಂಶ ಬೀಳುವದಕ್ಕಿಂತ ಮೊದಲು ರಾಜ್ಯದ ಎಲ್ಲ 28 ಸೀಟುಗಳನ್ನು ತಾವೇ ಗೆಲ್ಲೋದಾಗಿ ಹೇಳುತ್ತಿದ್ದರಾದರೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅದು ಚಿಕ್ಕ ಸಾಧನೆಯೇನೂ ಅಲ್ಲ. ಯಾಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ. ವಿರೋಧ ನಾಯಕ ಆರ್ ಅಶೋಕ (R Ashoka) ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನಿಸ್ಸಂದೇಹವಾಗಿ ಅಭಿನಂದನಾರ್ಹರು. ಲೋಕಸಭಾ ಚುನಾವಣೆಯ ಎಲ್ಲ ಫಲಿತಾಂಶಗಳು ಹೊರಬಿದ್ದ ಬಳಿಕ ಬಿಜೆಪಿ ಕಚೇರಿ ಮುಂಭಾಗದಲ್ಲಿ ಅಶೋಕ, ವಿಜಯೇಂದ್ರ ಮತ್ತು ಸಿಟಿ ರವಿ ಸಾವಿರಾರು ಕಾರ್ಯಕರ್ತರೊಂದಿಗೆ ಸಂಭ್ರಮ ಆಚರಿಸಿದರು. ಬ್ಯಾಂಡು ಬಾಜಾದ ಸದ್ದಿಗೆ ಕಾರ್ಯಕರ್ತರೇನೋ ಕುಣಿಯುತ್ತಿದ್ದರು, ಅದರೆ ಈ ಮೂವರು ಮಾತ್ರ ಕುಣಿಯಲೊಲ್ಲರು, ಕೊನೆಗೆ ಅವರ ಆಗ್ರಹಕ್ಕೆ ಮಣಿದು ವಿಜಯೇಂದ್ರ ಎರಡೂ ಕೈ ಮೇಲೆತ್ತಿ ಚಪ್ಪಾಳೆ ಬಾರಿಸುತ್ತಾ ಮೈಯನ್ನು ಒಂದರೆಕ್ಷಣ ಟ್ವಿಸ್ಟ್ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ: ಹೊರಗಿನವ ಅಂತ ಟೀಕಿಸಿದ ಕಾಂಗ್ರೆಸ್ ನಾಯಕರಿಗೆ ಜನರೇ ತಕ್ಕ ಉತ್ತರ ನೀಡಿದ್ದಾರೆ: ಜಗದೀಶ್ ಶೆಟ್ಟರ್