ಮೈಸೂರಿನ ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ; ಕೂಡಲೇ ಬೇರೆ ಬಣ್ಣ ಹಚ್ಚುವಂತೆ ಕನ್ನಡ ಸಂಘಟನೆಗಳ ಎಚ್ಚರಿಕೆ

| Updated By: ಆಯೇಷಾ ಬಾನು

Updated on: Feb 24, 2024 | 9:13 AM

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಒಡೆತನದ ಹೋಟೆಲ್​ನ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ ಹಚ್ಚಲಾಗಿದೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದು ಕನ್ನಡ ಬಾವುಟಕ್ಕೆ ಅವಮಾನ ಮಾಡಲಾಗಿದೆ. ಆದಷ್ಟು ಬೇಗ ಬಣ್ಣ ಬದಲಾಯಿಸಿ. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೈಸೂರು, ಫೆ.24: ಮೈಸೂರಿನ ಹೈವೇ ಸರ್ಕಲ್‌ನಲ್ಲಿರುವ ನಲಪಾಡ್ ಹೋಟೆಲ್ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ ಹಚ್ಚಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಮೈಸೂರಿನ ಹೈವೇ ವೃತ್ತದಲ್ಲಿರುವ ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ ಹಚ್ಚಲಾಗಿದೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಹೋಟೆಲ್ ಮುಂದೆ ಜಮಾಯಿಸಿ ಆಕ್ರೋಶ ಹೊರ ಹಾಕಿವೆ. ಹಾಗೂ ಕೂಡಲೇ ಬೇರೆ ಬಣ್ಣ ಹಚ್ಚುವಂತೆ ತಾಕೀತು ಮಾಡಿವೆ. ಇಲ್ಲವಾದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಎರಡು ವರ್ಷದ ಹಿಂದೆ ನಲಪಾಡ್ ಹೋಟೆಲ್​ನ ಉಸ್ತುವಾರಿ ಸಯ್ಯದ್ ರಿಯಾಜ್, ಕೃತಿಕಾ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ