‘ಪುಟ್ಟಗೌರಿ ಮದುವೆ’ ಬಗ್ಗೆ ಪುನೀತ್ ಮಾತಾಡಿದ್ದರು; ಆ ದಿನಗಳನ್ನು ನೆನಪಿಸಿಕೊಂಡ ನಟಿ ರಂಜನಿ ರಾಘವನ್
‘ನನ್ನ ರಾಜಹಂಸ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಅಪ್ಪು ಸರ್ ಅವರ ಮನೆಗೆ ಹೋದಾಗ ಪುಟ್ಟಗೌರಿ ಮದುವೆ ಬಗ್ಗೆ ಮಾತನಾಡಿದ್ದರು’ ಎಂದು ಆ ಭೇಟಿಯ ನೆನಪನ್ನು ರಂಜನಿ ರಾಘವನ್ ಮೆಲುಕು ಹಾಕಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆ ನಡುವೆ ಒಂದು ಒಡನಾಟ ಯಾವಾಗಲೂ ಇದ್ದೇ ಇರುತ್ತದೆ. ಅನೇಕ ಸೀರಿಯಲ್ಗಳನ್ನು ಸಿನಿಮಾದ ಸ್ಟಾರ್ ಕಲಾವಿದರು ಇಷ್ಟಪಡುತ್ತಾರೆ. ರಂಜನಿ ರಾಘವನ್ ಅವರು ಈ ಹಿಂದೆ ನಟಿಸುತ್ತಿದ್ದ ‘ಪುಟ್ಟಗೌರಿ ಮದುವೆ’ (Putta Gowri Maduve) ಧಾರಾವಾಹಿ ತುಂಬ ಜನಪ್ರಿಯವಾಗಿತ್ತು. ಆ ಸೀರಿಯಲ್ ಬಗ್ಗೆ ಒಮ್ಮೆ ಪುನೀತ್ ರಾಜ್ಕುಮಾರ್ (Puneeth Rajkumar) ಕೂಡ ಮಾತನಾಡಿದ್ದರು. ಆ ದಿನಗಳನ್ನು ರಂಜನಿ ರಾಘವನ್ (Ranjani Raghavan) ಅವರು ನೆನಪು ಮಾಡಿಕೊಂಡಿದ್ದಾರೆ. ‘ನಾನು 2-3 ಸಲ ಅಪ್ಪು ಸರ್ ಭೇಟಿ ಮಾಡಿದ್ದೆ. ನನ್ನ ರಾಜಹಂಸ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಅವರ ಮನೆಗೆ ಹೋದಾಗ ಪುಟ್ಟಗೌರಿ ಮದುವೆ ಬಗ್ಗೆ ಮಾತನಾಡಿದ್ದರು. ತಮ್ಮ ಮನೆಯವರು ಮತ್ತು ಮನೆ ಕೆಲಸದವರೆಲ್ಲ ಆ ಸೀರಿಯಲ್ ನೋಡ್ತಾರೆ ಅಂತ ಪುನೀತ್ ನಮ್ಮನ್ನು ಕರೆದು ಮಾತನಾಡಿಸಿದ್ದರು. ಅವರು ಬಹುಮುಖ ಪ್ರತಿಭೆ. ಅವರು ಕೇವಲ ನಟ ಆಗಿದ್ದರೆ ಇಷ್ಟು ಪ್ರೀತಿ ಇರುತ್ತಿರಲಿಲ್ಲ. ತೆರೆ ಆಚೆಗೂ ಕೂಡ ಅವರು ಹೀರೋ. ಇಡೀ ಚಿತ್ರರಂಗ ಬೆಳೆಯಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಅದಕ್ಕಾಗಿಯೇ ಪಿಆರ್ಕೆ ಆಡಿಯೋ ಮತ್ತು ಪ್ರೊಡಕ್ಷನ್ ಕಂಪನಿ ಆರಂಭಿಸಿದ್ದರು’ ಎಂದಿದ್ದಾರೆ ರಂಜನಿ ರಾಘವನ್. ಪ್ರಸ್ತುತ ‘ಕನ್ನಡತಿ’ ಧಾರಾವಾಹಿ ಮೂಲಕ ರಂಜನಿ ಅವರ ಜನಪ್ರಿಯತೆ ಹೆಚ್ಚಿದೆ. ಅವರಿಗೆ ಜೋಡಿಯಾಗಿ ಕಿರಣ್ ರಾಜ್ ಅಭಿನಯಿಸುತ್ತಿದ್ದಾರೆ. ಭುವಿ ಪಾತ್ರದಲ್ಲಿ ರಂಜನಿ ನಟನೆ ಜನರಿಗೆ ಇಷ್ಟ ಆಗಿದೆ. ಬರಹಗಾರ್ತಿ ಆಗಿಯೂ ಅವರು ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ:
‘ಕನ್ನಡತಿ’ ನಟಿ ರಂಜನಿ ರಾಘವನ್ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ
‘ಅಶ್ವಿನಿ ಅಕ್ಕ ಇನ್ನೂ ಮೌನವಾಗಿಯೇ ಇದ್ದಾರೆ’; ಪುನೀತ್ ಗನ್ಮ್ಯಾನ್ ತೆರೆದಿಟ್ಟ ವಿವರಗಳು