ಅಯೋಧ್ಯೆಯ ಧರ್ಮಪಥ್ ನಲ್ಲಿ ನಡೆದಾಡುವವರಿಗೆ ಆಧ್ಯಾತ್ಮಿಕ ಅನುಭೂತಿಯುಂಟಾಗುವುದು ನಿಶ್ಚಿತ!
ಅಯೋಧ್ಯೆಯನ್ನು ಪ್ರವೇಶಿಸುತ್ತಿದ್ದಂತೆಯೇ, ಬಲಭಾಗದಲ್ಲಿ ಒಂದು ಬೃಹದಾಕಾರದ ವೀಣೆಯನ್ನು ನೋಡಬಹುದು. ನಿಮಗೆ ಚೆನ್ನಾಗಿ ನೆನಪಿದೆ, ಇದೇ ವೀಣೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ (ಈಗ X) ಹ್ಯಾಂಡಲ್ ನಲ್ಲಿ ಬಹಳ ಚೆನ್ನಾಗಿ ಬರೆದುಕೊಂಡಿದ್ದರು.
ಅಯೋಧ್ಯೆ: ರಾಮ ಜನಿಸಿದ ಅಯೋಧ್ಯೆಯಲ್ಲಿ ಇನ್ನು ಪ್ರತಿದಿನ ರಾಮೋತ್ಸವ, ದಶರಥ ಪುತ್ರ ರಾಮನ ಹಬ್ಬ. 2019 ಕ್ಕಿಂತ ಮುಂಚಿನ ಮತ್ತು ಈಗಿನ ಅಯೋಧ್ಯೆಯ ನಡುವೆ ಅಗಾಧ ವ್ಯತ್ಯಾಸವಿದೆ. ಕಿರಿದಾಗಿದ್ದ ರಸ್ತೆಗಳ ಅಗಲೀಕರಣವಾಗಿದೆ. ಟಿವಿ9 ಕನ್ನಡ ವಾಹಿನಿಯ ವರದಿಗಾರ ಅಯೋಧ್ಯೆ ನಗರಿಯನ್ನು ಪ್ರವೇಶಿಸುವ ರಸ್ತೆಯಲ್ಲಿ ಈ ವಾಕ್ ಥ್ರೂ ಮಾಡಿದ್ದಾರೆ. ರಸ್ತೆಗೆ ಧರ್ಮಪಥ್ (Dharmapath) ಅಂತ ಹೆಸರಿಡಲಾಗಿದ್ದು ನೋಡೋದಿಕ್ಕೆ ರಾಜವೀದಿಯಂತೆಯೇ ಕಾಣುತ್ತದೆ. ರಸ್ತೆಯನ್ನು ಅಲಂಕರಿಸುವ ಕೆಲಸ ಜಾರಿಯಲ್ಲಿದೆ. ಅಲ್ಲಿಂದ ಕೊಚ ಮುಂದೆ ಸಾಗಿದರೆ, ಒಂದು ಸರ್ಕಲ್ ಇದ್ದು ಅದಕ್ಕೆ ವಿಶ್ವವಿಖ್ಯಾತ ಹಿನ್ನೆಲೆಗಾಯಕಿ ಗಾನಕೋಗಿಲೆ ದಿವಂಗತ ಲತಾ ಮಂಗೇಶ್ಕರ್ (late Lata Mangeshkar) ಅವರ ಹೆಸರನ್ನಿಡಲಾಗಿದೆ. ಅಯೋಧ್ಯೆಯನ್ನು ಪ್ರವೇಶಿಸುತ್ತಿದ್ದಂತೆಯೇ, ಬಲಭಾಗದಲ್ಲಿ ಒಂದು ಬೃಹದಾಕಾರದ ವೀಣೆಯನ್ನು (massive Veena) ನೋಡಬಹುದು. ನಿಮಗೆ ಚೆನ್ನಾಗಿ ನೆನಪಿದೆ, ಇದೇ ವೀಣೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ತಮ್ಮ ಟ್ವಿಟ್ಟರ್ (ಈಗ X) ಹ್ಯಾಂಡಲ್ ನಲ್ಲಿ ಬಹಳ ಚೆನ್ನಾಗಿ ಬರೆದುಕೊಂಡಿದ್ದರು.
ಕನ್ನಡಿಗರು ಸಹ ಅಯೋಧ್ಯೆಗೆ ಭೇಟಿ ನೀಡಲಾರಂಭಿಸಿದ್ದು ಒಂದಷ್ಟು ಜನರೊಂದಿಗೆ ಟಿವಿ9 ವರದಿಗಾರ ಮಾತಾಡಿದ್ದಾರೆ. ಅವರಲ್ಲಿ 2-3 ಜನ ಬ್ಯಾಂಕ್ ಉದ್ಯೋಗಿಗಳಾಗಿದ್ದಾರೆ ಮತ್ತು ಕರ್ನಾಟಕ ಬ್ಯಾಂಕಿನ ದೆಹಲಿ ಶಾಖೆಯಲ್ಲಿ ಕೆಲಸ ಮಾಡುತ್ತಾರೆ. ಅವರು ಹೇಳುವ ಪ್ರಕಾರ ಟಿವಿಗಳಲ್ಲಿ ನೋಡುತ್ತಿದ್ದ ಅಯೋಧ್ಯೆ ಮತ್ತು ಈಗಿನ ಅಯೋಧ್ಯೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ, ಮತ್ತು ಬ್ಲ್ಯಾಕ್ ಅಂಡ್ ಆಗಿದ್ದ ಪಟ್ಟಣ ಈಗ ವರ್ಣಮಯವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ