Video: ಕನ್ಯಾಕುಮಾರಿ ಕಡಲತೀರದಲ್ಲಿ ಸತ್ತ ದೈತ್ಯ ತಿಮಿಂಗಿಲ ಪತ್ತೆ
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಮಿಡಲಂ ಕಡಲತೀರದಲ್ಲಿ ಬೃಹತ್ ಸತ್ತ ತಿಮಿಂಗಿಲವೊಂದು ಪತ್ತೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಪರಿಶೀಲನೆ ನಡೆಸಿದೆ. ದೊಡ್ಡ ಹಡಗಿಗೆ ಡಿಕ್ಕಿ ಹೊಡೆದ ಕಾರಣ ತಿಮಿಂಗಿಲ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ವಿಧಿವಿಜ್ಞಾನ ಪರೀಕ್ಷೆ ಬಳಿಕ ತಿಮಿಂಗಿಲವನ್ನು ಕಡಲತೀರದಲ್ಲೇ ಮಣ್ಣು ಮಾಡಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ತಮಿಳುನಾಡು, ಡಿ.10: ಕನ್ಯಾಕುಮಾರಿ ಜಿಲ್ಲೆಯ ಮಿಡಲಂ ಕಡಲತೀರದಲ್ಲಿ ಮಂಗಳವಾರ ದೊಡ್ಡ ಆಕಾರದ ಸತ್ತ ತಿಮಿಂಗಿಲವೊಂದು ಪತ್ತೆಯಾಗಿದೆ. ಮಿಡಲಂ ನಿವಾಸಿಯೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸತ್ತ ತಿಮಿಂಗಿಲವನ್ನು ಪರಿಶೀಲನೆ ನಡೆಸಿದ ಅರಣ್ಯ ಅಧಿಕಾರಿಗಳು, ದೊಡ್ಡ ಹಡಗಿಗೆ ಈ ಮೀನು ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಿದ್ದಾರೆ. ಇನ್ನು ಈ ಬಗ್ಗೆ ತಿಮಿಂಗಿಲದ ವಿಧಿವಿಜ್ಞಾನ ಪರೀಕ್ಷೆ ನಡೆಸಿದ ನಂತರ ಕಡಲತೀರದಲ್ಲಿ ಮಣ್ಣು ಮಾಡಿದ್ದಾರೆ.
ವಿಡಿಯೋ ಸ್ಟೋರಿ ನೋಡಲು ಇಲ್ಲಿ ಕ್ಲಿಕ್ ಮಾಡಿ

