ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದೇನು?

Updated on: Oct 31, 2026 | 3:53 PM

"ಕರ್ನಾಟಕಕ್ಕೆ ಬಂದು ನೆಲದ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು, ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಸ್ಥಳೀಯರಿಗೆ ಉದ್ಯೋಗ ಕೊಡದೆ ವಂಚಿಸುವುದು ಸರಿಯಲ್ಲ. ನಾವು ಯಾವುದೇ ಶೇರು ಅಥವಾ ಲಾಭ ಕೇಳುತ್ತಿಲ್ಲ, ಕೇವಲ ನಮ್ಮ ನೆಲದಲ್ಲಿ ನಮಗೆ ಉದ್ಯೋಗ ಕೊಡಿ ಎಂದು ಕೇಳುತ್ತಿದ್ದೇವೆ," ಎಂದು ನಾರಾಯಣಗೌಡ ಹೇಳಿದರು. ಕನ್ನಡದಲ್ಲಿ ಪರಿಚಯ ಪತ್ರ ಸಲ್ಲಿಸಿದ ಕಾರಣಕ್ಕೆ ಅಥವಾ ಕನ್ನಡಿಗರೆಂದು ಗೊತ್ತಾದ ತಕ್ಷಣ ಉದ್ಯಮಗಳಿಂದ ಹೊರಹಾಕುವಂತಹ ಘಟನೆಗಳನ್ನು ಕರವೇ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು, ಅಕ್ಟೋಬರ್ 31: ಕರವೇ ಅಧ್ಯಕ್ಷ ನಾರಾಯಣ ಗೌಡ ನವೆಂಬರ್ 1ರಿಂದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ರಾಜ್ಯವ್ಯಾಪಿ ಅಭಿಯಾನ ಆರಂಭಿಸಲಿದ್ದಾರೆ. ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದು, ಉದ್ಯೋಗದ ಅಂಕಿ-ಅಂಶಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಉದ್ಯಮಿಗಳ ಬೆದರಿಕೆಗೆ ಮಣಿಯದೆ, ಕಾಯ್ದೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಒತ್ತಾಯಿಸಿದ್ದಾರೆ. ರಾಜ್ಯದ ಐಟಿ ಮತ್ತು ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನವೆಂಬರ್ 1ರಿಂದ ರಾಜ್ಯವ್ಯಾಪಿ ಬೃಹತ್ ಅಭಿಯಾನವನ್ನು ಪ್ರಾರಂಭಿಸಲಿದೆ. ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಈ ಅಭಿಯಾನದ ಬಗ್ಗೆ ಮಾಹಿತಿ ನೀಡಿದ್ದು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಕಾಯ್ದೆ ರೂಪದಲ್ಲಿ ತರುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನವೆಂಬರ್ 1ರಿಂದ 30ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ, ಕರವೇ ತಂಡಗಳು ರಾಜ್ಯದ ಐಟಿ ಸೇರಿದಂತೆ ವಿವಿಧ ಉದ್ಯಮಗಳಿಗೆ ಭೇಟಿ ನೀಡಿ, ಕನ್ನಡಿಗರಿಗೆ ನೀಡಲಾಗಿರುವ ಉದ್ಯೋಗಗಳ ಕುರಿತು ಅಂಕಿ-ಅಂಶಗಳನ್ನು ಸಂಗ್ರಹಿಸಲಿವೆ. ಮಾಹಿತಿ ನೀಡಲು ನಿರಾಕರಿಸುವ ಕಂಪನಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ. ಕನ್ನಡಿಗರನ್ನು ಭಾಷಾ ಆಧಾರದ ಮೇಲೆ ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಡಾ. ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಲು ಒತ್ತಾಯಿಸಿದರು.

“ಕರ್ನಾಟಕಕ್ಕೆ ಬಂದು ನೆಲದ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು, ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಸ್ಥಳೀಯರಿಗೆ ಉದ್ಯೋಗ ಕೊಡದೆ ವಂಚಿಸುವುದು ಸರಿಯಲ್ಲ. ನಾವು ಯಾವುದೇ ಶೇರು ಅಥವಾ ಲಾಭ ಕೇಳುತ್ತಿಲ್ಲ, ಕೇವಲ ನಮ್ಮ ನೆಲದಲ್ಲಿ ನಮಗೆ ಉದ್ಯೋಗ ಕೊಡಿ ಎಂದು ಕೇಳುತ್ತಿದ್ದೇವೆ,” ಎಂದು ನಾರಾಯಣಗೌಡ ಹೇಳಿದರು. ಕನ್ನಡದಲ್ಲಿ ಪರಿಚಯ ಪತ್ರ ಸಲ್ಲಿಸಿದ ಕಾರಣಕ್ಕೆ ಅಥವಾ ಕನ್ನಡಿಗರೆಂದು ಗೊತ್ತಾದ ತಕ್ಷಣ ಉದ್ಯಮಗಳಿಂದ ಹೊರಹಾಕುವಂತಹ ಘಟನೆಗಳನ್ನು ಕರವೇ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೇರ ಸಂದೇಶ ರವಾನಿಸಿದ ನಾರಾಯಣಗೌಡ, ನವೆಂಬರ್ 1ರಂದು ಕೇವಲ ಕನ್ನಡ ಧ್ವಜ ಹಾರಿಸಿ, ಬರೆದು ಕೊಟ್ಟ ಭಾಷಣ ಓದುವುದರಿಂದ ಪ್ರಯೋಜನವಿಲ್ಲ. ಕನ್ನಡಿಗರು ನಿಮ್ಮ ಮೇಲೆ ಭರವಸೆ ಇಟ್ಟಿದ್ದಾರೆ. ಜಾತಿ ಅಥವಾ ಧರ್ಮದ ಆಧಾರದ ಮೇಲೆ ಮೀಸಲಾತಿ ಕೇಳುತ್ತಿಲ್ಲ, ಈ ನೆಲದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ತನ್ನಿ ಎಂದು ಒತ್ತಾಯಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More