‘ದರ್ಶನ್​ ಅಲ್ಲದಿದ್ರೆ ಇನ್ನೊಬ್ರು ಎಂಬ ಉಡಾಫೆ..’: ಕರಿ ಸುಬ್ಬು ಹೇಳಿದ ಅಚ್ಚರಿಯ ವಿಚಾರ

Edited By:

Updated on: Jul 09, 2024 | 7:31 PM

‘ಮಣಿ’ ಸಿನಿಮಾಗೆ ದರ್ಶನ್​ ಹೀರೋ ಆಗಬೇಕಿತ್ತು. ಆ ಸಿನಿಮಾವನ್ನು ಕರಿ ಸುಬ್ಬು ನಿರ್ಮಾಣ ಮಾಡಿದ್ದರು. ಆದರೆ ದರ್ಶನ್​ ಅವರನ್ನು ಬಿಟ್ಟು ಕರಿ ಸುಬ್ಬು ಸಿನಿಮಾ ಮಾಡಿದರು. ಆ ರೀತಿ ಆಗಿದ್ದು ಯಾಕೆ ಎಂಬುದನ್ನು ಕರಿ ಸುಬ್ಬು ಈಗ ವಿವರಿಸಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್​ ಜೈಲು ಸೇರಿರುವ ಹಿನ್ನೆಲೆಯಲ್ಲಿ ಕರಿ ಸುಬ್ಬು ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟ ದರ್ಶನ್​ ಅರೆಸ್ಟ್​ ಆಗಿದ್ದರಿಂದ ಕೆಲವು ಸಿನಿಮಾ ತಂಡಗಳಿಗೆ ತೊಂದರೆ ಆಗಿದೆ. ಅವರು ತೊಡಗಿಕೊಂಡಿದ್ದ ಸಿನಿಮಾದ ಶೂಟಿಂಗ್​ ನಿಂತಿದೆ. ಒಟ್ಟಾರೆ ಬೆಳವಣಿಗೆಯ ಕುರಿತು ಕನ್ನಡ ಚಿತ್ರರಂಗದ ಅನೇಕ ವ್ಯಕ್ತಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನಿರ್ಮಾಪಕ, ನಟ ಕರಿ ಸುಬ್ಬು ಅವರು ಕೂಡ ಈ ಕುರಿತ ಮಾತನಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್​ ಜೊತೆ ಬಹಳ ಹಿಂದೆಯೇ ಕರಿ ಸುಬ್ಬು ಸಿನಿಮಾ ಮಾಡಬೇಕಿತ್ತು. ‘ನಾನು ನಿರ್ಮಾಣ ಮಾಡಿದ ‘ಮಣಿ’ ಸಿನಿಮಾಗೆ ದರ್ಶನ್​ ಹೀರೋ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ನಾವೇ ಅವರನ್ನು ಬಿಟ್ಟೆವು. ಅದು ಅವರ ತಪ್ಪಲ್ಲ. ನಮ್ಮ ತಂಡದ ತಪ್ಪು. ಅವರ ಹಿಂದಿನ ಸಿನಿಮಾಗಳು ರಿಲೀಸ್​ ಆಗಿರಲಿಲ್ಲ. ಟೈಮ್​ ಮುಂದಕ್ಕೆ ಹೋಗುತ್ತಿತ್ತು. ಕಾಯುವ ವ್ಯವಧಾನ ನಮಗೆ ಇರಲಿದೆ. ದರ್ಶನ್​ ಅಲ್ಲದಿದ್ರೆ ಇನ್ನೊಬ್ರು ಎಂಬ ಉಡಾಫೆಯ ಚರ್ಚೆಗೆ ನಾನು ಬಲಿಪಶು ಆಗಬೇಕಾಯಿತು. ಇಲ್ಲದಿದ್ದರೆ ಅಂದೇ ನಾನು ದರ್ಶನ್​ ಸಿನಿಮಾಗೆ ನಿರ್ಮಾಪಕ ಆಗುತ್ತಿದ್ದೆ’ ಎಂದು ಕರಿ ಸುಬ್ಬು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More