ಯುವತಿಗೆ ವಿನಾಕಾರಣ ಕಿರುಕುಳ ನೀಡಿದ ಆರೋಪ; ಸ್ಥಳೀಯರಿಂದ ಆರೋಪಿಗೆ ಬಿತ್ತು ಗೂಸಾ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 28, 2023 | 7:46 PM

ಕಾರ್ಕಳದ ಖಾಸಗಿ ಪೈನಾನ್ಸ್ ಒಂದರಲ್ಲಿ ಅಕೌಂಟೆಂಟ್ ಆಗಿದ್ದ ಯುವತಿಗೆ, ವ್ಯಕ್ತಿಯೊಬ್ಬ ವಿನಾಕಾರಣ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರ ಗುಂಪು ವ್ಯಕ್ತಿಯನ್ನು ಕಾರ್ಕಳ ಬಸ್ ನಿಲ್ದಾಣ(Karkala Bus Stand)ದಲ್ಲಿ ಎಳೆದಾಡಿ ಮುಖಕ್ಕೆ ಮಂಗಳಾರತಿ ಮಾಡಿದ ಘಟನೆ ಬುಧವಾರ ನಡೆದಿದೆ.

ಉಡುಪಿ, ಡಿ.28: ಕಾರ್ಕಳದ ಖಾಸಗಿ ಪೈನಾನ್ಸ್ ಒಂದರಲ್ಲಿ ಅಕೌಂಟೆಂಟ್ ಆಗಿದ್ದ ಯುವತಿಗೆ, ವ್ಯಕ್ತಿಯೊಬ್ಬ ವಿನಾಕಾರಣ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರ ಗುಂಪು ವ್ಯಕ್ತಿಯನ್ನು ಕಾರ್ಕಳ ಬಸ್ ನಿಲ್ದಾಣ(Karkala Bus Stand)ದಲ್ಲಿ ಎಳೆದಾಡಿ ಮುಖಕ್ಕೆ ಮಂಗಳಾರತಿ ಮಾಡಿದ ಘಟನೆ ಬುಧವಾರ ನಡೆದಿದೆ. ಇರ್ವತ್ತೂರಿನ ಜಗದೀಶ್ ಪೂಜಾರಿ ಎಂಬಾತ ಕಳೆದ ಹಲವು ದಿನಗಳಿಂದ ಕಾರ್ಕಳದ ಫೈನಾನ್ಸ್​ನಲ್ಲಿ ಅಕೌಂಟೆಂಟ್ ಆಗಿದ್ದ ನಂದಳಿಕೆ ಗ್ರಾಮದ ಯುವತಿಯನ್ನು‌ ಪದೇ ಪದೇ ಹಿಂಬಾಲಿಸಿ ಅಡ್ಡಗಟ್ಟಿ ಮಾತನಾಡಿಸಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಬುಧವಾರ ಸಂಜೆ ಯುವತಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದಾಗ ಸ್ಥಳೀಯರು ಚಪಲಚೆನ್ನಿಗರಾಯನನ್ನು ಹಿಡಿದು ಎಳೆದಾಡಿ ಹಿಗ್ಗಾಮುಗ್ಗಾ ಬೈದು ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಈ ಘಟನೆಯ ಬಳಿಕ ಯುವತಿ ಈತನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ‌ ಜಗದೀಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ