‘ಕಾಟೇರ’ ನೋಡಲು ಮಧ್ಯರಾತ್ರಿ ಜನ ಜಾತ್ರೆ; ದರ್ಶನ್​ಗೆ ಜೈಕಾರ, ಪಟಾಕಿ ಅಬ್ಬರ; ವಿಡಿಯೋ ನೋಡಿ..

‘ಕಾಟೇರ’ ನೋಡಲು ಮಧ್ಯರಾತ್ರಿ ಜನ ಜಾತ್ರೆ; ದರ್ಶನ್​ಗೆ ಜೈಕಾರ, ಪಟಾಕಿ ಅಬ್ಬರ; ವಿಡಿಯೋ ನೋಡಿ..

ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Dec 29, 2023 | 6:33 AM

ಬೆಂಗಳೂರಿನ ಜೆ.ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರದ ಮುಂಭಾಗ ನಡು ರಾತ್ರಿಯಲ್ಲೂ ಜನ ಜಾತ್ರೆ ಸೇರಿತ್ತು. ದರ್ಶನ್​ ಫ್ಯಾನ್ಸ್​ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಮೊದಲ ಶೋ ನೋಡಿದ ಅಭಿಮಾನಿಗಳು ಪಾಸಿಟಿವ್​ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಗುರುವಾರ (ಡಿ.28) ಮಧ್ಯ ರಾತ್ರಿಯಿಂದಲೇ ಕಾಟೇರ’ (Kaatera) ಸಿನಿಮಾದ ಅಬ್ಬರ ಶುರುವಾಗಿದೆ. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ (Darshan) ಅಭಿಮಾನಿಗಳು ಭಾರಿ ಉತ್ಸಾಹದಿಂದ ಚಿತ್ರಮಂದಿರಗಳ ಎದುರು ನೆರೆದಿದ್ದಾರೆ. ಬೆಂಗಳೂರಿನ ಜೆ.ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರದ ಮುಂಭಾಗ ನಡು ರಾತ್ರಿಯಲ್ಲೂ ಜನ ಜಾತ್ರೆ ಸೇರಿತ್ತು. ದರ್ಶನ್​ ಫ್ಯಾನ್ಸ್​ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ದರ್ಶನ್​ ಅವರ ಬಗೆಬಗೆಯ ಕಟೌಟ್​ಗಳು ತಲೆ ಎತ್ತಿವೆ. ಮೊದಲ ಶೋ ನೋಡಿದ ಅಭಿಮಾನಿಗಳು ಪಾಸಿಟಿವ್​ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರಕ್ಕೆ ತರುಣ್​ ಸುಧೀರ್​ (Tharun Sudhir) ನಿರ್ದೇಶನ ಮಾಡಿದ್ದಾರೆ. ದರ್ಶನ್​ಗೆ ಜೋಡಿಯಾಗಿ ಮಾಲಾಶ್ರಿ ಮಗಳು ಆರಾಧನಾ ರಾಮ್​ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.