Kaatera Movie Review: ಸಂಘರ್ಷದ ಕಥೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವ ‘ಕಾಟೇರ’

Kaatera Review: ರೆಟ್ರೋ ಕಾಲದ ಕಥೆಯನ್ನು ಬಹಳ ನೈಜವಾಗಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಕಾಟೇರ ಎಂಬ ಪಾತ್ರದಲ್ಲಿ ದರ್ಶನ್ ಅವರು ಉತ್ತಮ ಅಭಿನಯ ನೀಡಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಎರಡು ಗೆಟಪ್​ ಇದೆ. ಮಾಸ್​ ಮತ್ತು ಕ್ಲಾಸ್​ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ರೀತಿಯಲ್ಲಿ ‘ಕಾಟೇರ’ ಸಿನಿಮಾ ಮೂಡಿಬಂದಿದೆ.

Kaatera Movie Review: ಸಂಘರ್ಷದ ಕಥೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವ ‘ಕಾಟೇರ’
ಆರಾಧನಾ, ದರ್ಶನ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Dec 29, 2023 | 6:39 AM

ಚಿತ್ರ: ಕಾಟೇರ. ನಿರ್ಮಾಣ: ರಾಕ್‌ಲೈನ್ ವೆಂಕಟೇಶ್. ನಿರ್ದೇಶನ: ತರುಣ್ ಸುಧೀರ್. ಪಾತ್ರವರ್ಗ: ದರ್ಶನ್, ಆರಾಧನಾ ರಾಮ್, ಜಗಪತಿ ಬಾಬು, ಅವಿನಾಶ್, ಶ್ರುತಿ, ಕುಮಾರ್ ಗೋವಿಂದ್, ಅಚ್ಯುತ್ ಕುಮಾರ್, ವೈಜನಾಥ ಬೀರಾದಾರ ಮುಂತಾದವರು. ಸ್ಟಾರ್: 3.5/5

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ’ ಸಿನಿಮಾ (Kaatera Movie) ಬಿಡುಗಡೆ ಆಗಿದೆ. ಅಭಿಮಾನಿಗಳು ಈ ಚಿತ್ರವನ್ನ ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ. ‘ರಾಬರ್ಟ್​’ ಬಳಿಕ ನಿರ್ದೇಶಕ ತರುಣ್ ಸುಧೀರ್ ಮತ್ತು ದರ್ಶನ್ (Darshan) ಕಾಂಬಿನೇಷನ್‌ನಲ್ಲಿ ಮೂಡಿಬಂದ ಸಿನಿಮಾ ಎಂಬ ಕಾರಣಕ್ಕೆ ಫ್ಯಾನ್ಸ್ ನಿರೀಕ್ಷೆ ಹೆಚ್ಚಿತ್ತು. ಗುರುವಾರ (ಡಿಸೆಂಬರ್ 28) ಮಧ್ಯ ರಾತ್ರಿಯೇ ಅನೇಕ ಕಡೆಗಳಲ್ಲಿ ಶೋ ಆರಂಭ ಆಗಿದೆ. ಆ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ‘ಕಾಟೇರ’ ಸಿನಿಮಾ ವಿಮರ್ಶೆ (Kaatera Movie Review) ಇಲ್ಲಿದೆ..

‘ಕಾಟೇರ’ ಚಿತ್ರದ ಕಥೆ:

ಸಿನಿಮಾದ ಆರಂಭದಲ್ಲಿ 107 ಜನರ ಅಸ್ಥಿ ಪಂಜರ ಸಿಗುತ್ತದೆ. ಪೊಲೀಸರು ಅದರ ತನಿಖೆಗೆ ಇಳಿದಾಗ 15 ವರ್ಷಗಳ ಹಿಂದಿನ ಕಹಾನಿ ತೆರೆದುಕೊಳ್ಳುತ್ತದೆ. ಆ 107 ಜನರ ಸಾವಿಗೆ ಕಾರಣ ಆದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಫ್ಲ್ಯಾಶ್​ಬ್ಯಾಕ್​ನಲ್ಲಿ ಉತ್ತರ ಸಿಗುತ್ತದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ರೈತರಿಗಾಗಿ, ಪ್ರೀತಿಸಿದವಳಿಗಾಗಿ, ಕುಟುಂಬದವರಿಗಾಗಿ, ಊರಿನ ಜನರಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕೆ ನಿಂತ ಕಾಟೇರ ಎಂಬ ವೀರನ ಕಥೆ ಈ ಚಿತ್ರದಲ್ಲಿದೆ.

ದರ್ಶನ್ ಅಭಿಮಾನಿಗಳಿಗೆ ಸರ್ಪ್ರೈಸ್​:

ಸಾಮಾನ್ಯವಾಗಿ ಮಾಸ್​ ಹೀರೋಗಳ ಕಮರ್ಷಿಯಲ್​ ಸಿನಿಮಾಗಳಲ್ಲಿ ಒಂದಷ್ಟು ಸಿದ್ಧ ಸೂತ್ರಗಳು ಇರುತ್ತವೆ. ಆದರೆ ಆ ಸೂತ್ರವನ್ನು ಸಾಧ್ಯವಾದಷ್ಟು ಬಿಟ್ಟು, ಬೇರೆ ರೀತಿಯಲ್ಲಿ ‘ಕಾಟೇರ’ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಆಗಿದೆ. ಆ ವಿಚಾರದಲ್ಲಿ ನಿರ್ದೇಶಕ ತರುಣ್​ ಸುಧೀರ್​ ಅವರು ಮೆಚ್ಚುಗೆ ಗಳಿಸುತ್ತಾರೆ. ಕಥೆಯ ಆರಂಭದಲ್ಲಿಯೇ ಯಾರನ್ನೋ ಮೆಚ್ಚಿಸಬೇಕು ಎಂಬ ಉದ್ದೇಶದಿಂದ ಅವರು ಅನಗತ್ಯವಾಗಿ ಯಾವ ದೃಶ್ಯವನ್ನೂ ತುರುಕಿಲ್ಲ. ಶುರುವಿನಲ್ಲೇ ಫೈಟಿಂಗ್​ ತೋರಿಸಿಲ್ಲ. ಆ ಕಾರಣದಿಂದ ದರ್ಶನ್​ ಅಭಿಮಾನಿಗಳಿಗೆ ಈ ಚಿತ್ರ ಸರ್ಪ್ರೈಸ್ ನೀಡುತ್ತದೆ. ಮಾಸ್​ ಮನರಂಜನೆ ಬೇಕು ಎಂಬುವವರು ಸ್ವಲ್ಪ ಹೊತ್ತು ಕಾಯಬೇಕು. ಸಿನಿಮಾ ಶುರುವಾಗಿ ಅಂದಾಜು ಮುಕ್ಕಾಲು ಗಂಟೆ ಮುಗಿದ ಬಳಿಕವೇ ಮೊದಲ ಫೈಟ್​ ಬರುತ್ತದೆ. ಅಷ್ಟರಮಟ್ಟಿಗೆ ಪ್ರಯೋಗ ಈ ಸಿನಿಮಾದಲ್ಲಿ ಆಗಿದೆ.

ಭರ್ಜರಿ ಆ್ಯಕ್ಷನ್​ ದೃಶ್ಯಗಳು:

ದರ್ಶನ್​ ಅಭಿಮಾನಿಗಳು ಆ್ಯಕ್ಷನ್ ದೃಶ್ಯಗಳನ್ನು ಬಯಸುತ್ತಾರೆ. ಅಂಥವರಿಗೆ ಈ ಸಿನಿಮಾ ಖಂಡಿತಾ ನಿರಾಸೆ ಮಾಡುವುದಿಲ್ಲ. ಈ ಚಿತ್ರದಲ್ಲಿ ಹೊಡಿಬಡಿ ಸನ್ನಿವೇಶಕ್ಕೆ ಕಾರಣ ಆಗುವಂತಹ ಟ್ವಿಸ್ಟ್​ ಬರಬೇಕು ಎಂದರೆ ಪ್ರೇಕ್ಷಕರು ಬಹಳ ಹೊತ್ತು ಕಾಯಬೇಕು. ಆಮೇಲೆ ಕಾದಿದ್ದಕ್ಕೂ ಸಾರ್ಥಕ ಆಯ್ತು ಎಂಬಷ್ಟು ಆ್ಯಕ್ಷನ್​ ಸೀನ್​ಗಳನ್ನು ತರುಣ್​ ಸುಧೀರ್​ ತೋರಿಸುತ್ತಾರೆ. ಮಾಸ್​ ಪ್ರೇಕ್ಷಕರು ಈ ಚಿತ್ರವನ್ನು ಎಂಜಾಯ್​ ಮಾಡುತ್ತಾರೆ.

ಇದನ್ನೂ ಓದಿ: ‘ಕಾಟೇರ’ ಸಿನಿಮಾದ ಟಿಕೆಟ್​ ಖರೀದಿಸಿದ ನಟಿ ಆರಾಧನಾ ರಾಮ್​; ಫ್ಯಾನ್ಸ್​ ಜೊತೆ ವೀಕ್ಷಣೆ

ಸಾಮಾಜಿಕ ಸಂದೇಶ:

ಯಾವುದೋ ಕಟ್ಟು ಕಥೆಯನ್ನು ಹೇಳುವುದಕ್ಕಷ್ಟೇ ಈ ಸಿನಿಮಾ ಸೀಮಿತ ಆಗಿಲ್ಲ. ಒಂದು ಕಾಲದಲ್ಲಿ ರೈತರಿಗೆ ಆಗಿದ್ದ ಅನ್ಯಾಯವನ್ನು ‘ಕಾಟೇರ’ ಕಥೆ ಎತ್ತಿ ತೋರಿಸುತ್ತದೆ. ಮೇಲು-ಕೀಳು ಎಂಬ ಪಿಡುಗನ್ನು ನಿವಾರಿಸಬೇಕು ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಕಥಾನಾಯಕನಿಂದ ಸಿನಿಮಾದ ಮುಖ್ಯ ಸನ್ನಿವೇಶಗಳಲ್ಲಿ ಆ ಬಗ್ಗೆ ಬುದ್ಧಿಮಾತು ಹೇಳಿಸಲಾಗಿದೆ. ಆದರೂ ಅದು ಉಪದೇಶ ಎನಿಸದ ರೀತಿಯಲ್ಲಿ ಕಥೆಯ ನಡುವೆಯೇ ಬೆರೆತು ಹೋಗಿರುವುದು ಚೆನ್ನಾಗಿದೆ.

ಆರಾಧನಾ ನಟನೆ ಹೇಗಿದೆ?

ಮಾಲಾಶ್ರೀ ಪುತ್ರಿ ಆರಾಧನಾಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ಅವರು ತುಂಬ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಪಾತ್ರಕ್ಕೆ ನ್ಯಾಯ ಒದಗಿಸಲು ಅವರು ಸಾಧ್ಯವಾದಷ್ಟು ಪ್ರಯತ್ನಿಸಿದ್ದಾರೆ. ಅವರ ವಯಸ್ಸಿಗೆ ಸರಿ ಎನಿಸುವಂತಹ ಪಾತ್ರ ಇದಾಗಿದೆ. ಶ್ರುತಿ, ದರ್ಶನ್​, ಅವಿನಾಶ್​ ಅವರಂತಹ ಹಿರಿಯ ಕಲಾವಿದರ ಜೊತೆ ಬಹಳ ಆತ್ಮವಿಶ್ವಾಸದಿಂದ ಅವರು ಕ್ಯಾಮೆರಾ ಎದುರಿಸಿದ್ದಾರೆ.

ಬಹುತಾರಾಗಣದ ಸಿನಿಮಾ:

‘ಕಾಟೇರ’ ಸಿನಿಮಾದಲ್ಲಿ ಕೇವಲ ದರ್ಶನ್​ ಮಾತ್ರ ಅಬ್ಬರಿಸುವುದಿಲ್ಲ. ಈ ಚಿತ್ರದಲ್ಲಿ ಬರುವ ಹಲವು ಪಾತ್ರಗಳು ಹೈಲೈಟ್​ ಆಗಿವೆ. ವೈಜನಾಥ ಬೀರಾದಾರ, ಅವಿನಾಶ್​, ಕುಮಾರ್​ ಗೋವಿಂದ್​, ಶ್ರುತಿ ಸೇರಿದಂತೆ ಅನೇಕ ಕಲಾವಿದರು ನಿಭಾಯಿಸಿರುವ ಪಾತ್ರಗಳಿಗೆ ಕಥೆಯಲ್ಲಿ ಮಹತ್ವ ಸಿಕ್ಕಿದೆ. ಈ ಎಲ್ಲ ಕಲಾವಿದರಿಂದಾಗಿ ಸಿನಿಮಾದ ಮೆರುಗು ಹೆಚ್ಚಿದೆ. ವಿಲನ್​ ಪಾತ್ರದಲ್ಲಿ ಜಗಪತಿ ಬಾಬು ಎಂದಿನಂತೆ ಅಬ್ಬರಿಸಿದ್ದಾರೆ. ಬಾಲ ನಟ ರೋಹಿತ್​ ಅಭಿನಯಕ್ಕೆ ಮೆಚ್ಚುಗೆ ಸಲ್ಲಬೇಕು. ಕೆಲವೇ ದೃಶ್ಯಗಳಲ್ಲಿ ಬರುವ ಅಚ್ಯುತ್​ ಕುಮಾರ್​ ಕೂಡ ಗಮನ ಸೆಳೆಯುತ್ತಾರೆ.

ಫ್ಯಾಮಿಲಿ ಪ್ರೇಕ್ಷಕರಿಗೂ..

ಬರೀ ಮಾಸ್​ ಪ್ರೇಕ್ಷಕರಿಗೆ ಮಾತ್ರವಲ್ಲದೇ ಫ್ಯಾಮಿಲಿ ಪ್ರೇಕ್ಷಕರಿಗೂ ‘ಕಾಟೇರ’ ಸಿನಿಮಾ ಇಷ್ಟ ಆಗುತ್ತದೆ. ಅಕ್ಕ-ತಮ್ಮನ ಬಾಂಧವ್ಯದ ದೃಶ್ಯಗಳು ಭಾವುಕವಾಗಿವೆ. ದರ್ಶನ್​ ಮತ್ತು ತರುಣ್​ ಸುಧೀರ್​ ಅವರು ಎಲ್ಲ ಬಗೆಯ ಪ್ರೇಕ್ಷಕರನ್ನು ರಂಜಿಸುವ ರೀತಿಯಲ್ಲಿ ಈ ಸಿನಿಮಾ ಮಾಡಿದ್ದಾರೆ.

ಇದನ್ನೂ ಓದಿ: ‘ಕಾಟೇರ’ ವೇದಿಕೆಯಲ್ಲಿ ರೈತರ ಪರ ದನಿ ಎತ್ತಿದ ದರ್ಶನ್

ದರ್ಶನ್​ ಅಭಿನಯಕ್ಕೆ ಚಪ್ಪಾಳೆ:

ಕಾಟೇರ ಎಂಬ ಪಾತ್ರದಲ್ಲಿ ದರ್ಶನ್ ಅವರು ಉತ್ತಮ ಅಭಿನಯ ನೀಡಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಎರಡು ಗೆಟಪ್​ ಇದೆ. ಬಿಸಿರಕ್ತದ ಯುವಕನಾಗಿ ಹಾಗೂ ವಯಸ್ಸಾದ ವ್ಯಕ್ತಿಯಾಗಿ ಅವರ ಎರಡೂ ಲುಕ್​ ಇಷ್ಟವಾಗುತ್ತದೆ. ಆ್ಯಕ್ಷನ್​ ಬದಿಗಿಟ್ಟು ನೋಡಿದರೂ ಅಭಿನಯಕ್ಕೆ ಮಹತ್ವ ಇರುವಂತಹ ಪಾತ್ರ ಇದಾಗಿದೆ. ಈ ಪಾತ್ರಕ್ಕೆ ಅವರು ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಕೆಲವೊಮ್ಮೆ ಶಾಂತ ಸ್ವಭಾವದಿಂದ ಸೆಳೆದುಕೊಳ್ಳುತ್ತಾರೆ. ಇನ್ನೂ ಕೆಲವೊಮ್ಮೆ ಅಬ್ಬರಿಸುತ್ತಾ ಇಷ್ಟವಾಗುತ್ತಾರೆ.

ರೆಟ್ರೋ ಕಾಲದ ಕಥೆಯನ್ನು ಬಹಳ ನೈಜವಾಗಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಛಾಯಾಗ್ರಾಹಕ ಸುಧಾಕರ್​ ಎಸ್​. ರಾಜ್​ ಅವರ ಕೆಲಸ ಪ್ರಶಂಸಾರ್ಹವಾಗಿದೆ. ಮಾಸ್ತಿ ಬರೆದ ಸಂಭಾಷಣೆಗಳು ಕಥೆಗೆ ತುಂಬ ಪೂರವಾಗಿವೆ. ಯಾವುದೂ ಅತಿ ಎನಿಸಿದ ರೀತಿಯಲ್ಲಿ, ಅಭಿಮಾನಿಗಳು ಬಯಸುವ ಪಂಚಿಂಗ್​ ಡೈಲಾಗ್​ಗಳನ್ನೂ ನಡುನಡುವೆ ಸೇರಿಸುತ್ತ, ಪ್ರೇಕ್ಷಕರಿಗೆ ಕಿವಿಮಾತು ಹೇಳುವಂತಹ ಸಾಲುಗಳನ್ನು ಅವರು ಬರೆದಿದ್ದಾರೆ.

ಸಿನಿಮಾದ ಅವಧಿ 3 ಗಂಟೆ ಮೀರಿದೆ. ಇದರಿಂದ ಸ್ವಲ್ಪ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಆಗುತ್ತದೆ. ಹರಿಕೃಷ್ಣ ಅವರ ಸಂಗೀತದಿಂದ ‘ಕಾಟೇರ’ ಸಿನಿಮಾಗೆ ನಿರೀಕ್ಷಿತ ಬಲ ಸಿಕ್ಕಿಲ್ಲ. ಹಾಡುಗಳು ಹೆಚ್ಚಿನ ಕೊಡುಗೆ ನೀಡಿಲ್ಲ. ಕೆಲವು ದೃಶ್ಯಗಳನ್ನು ನೋಡಿದಾಗ ಬೇರೆ ಸಿನಿಮಾಗಳ ಸನ್ನಿವೇಶಗಳು ನೆನಪಿಗೆ ಬರುತ್ತವೆ. ಆದರೂ ಅವುಗಳನ್ನು ಕಾಟೇರನ ಕಥೆಗೆ ಚೆನ್ನಾಗಿ ಹೊಂದಿಕೆ ಆಗುವಂತೆ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:55 am, Fri, 29 December 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ