ಹುಬ್ಬಳ್ಳಿ: ಪ್ರತಿಷ್ಠಿತ ಹೋಟೆಲ್ನಲ್ಲಿ ಮಹಿಳೆಗೆ ಕಿರುಕುಳ, ಮೂವರ ವಿರುದ್ಧ ದೂರು ದಾಖಲು
ಹುಬ್ಬಳ್ಳಿಯ ಪ್ರತಿಷ್ಠಿತ ರಾಯಲ್ ರಿಟ್ಜ್ ಹೋಟೆಲ್ನಲ್ಲಿ ಮೂವರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಮೂವರ ವಿರುದ್ದ ಹುಬ್ಬಳ್ಳಿಯ APMC ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಕೈ ಸನ್ನೆ ಮಾಡಿ ಲೈಂಗಿಕವಾಗಿ ಕಿರುಕುಳ ನೀಡಿದ್ದರು. ಅಷ್ಟೇ ಅಲ್ಲದೆ ಇವೆಂಟ್ ಮಗಿದ ಮೇಲೆ ಕಾರ್ನಲ್ಲಿ ಮಹಿಳೆಯನ್ನು ಹಿಂಬಾಲಿಸಿದ್ದರು.
ಹುಬ್ಬಳ್ಳಿ, ಡಿ.24: ಪ್ರತಿಷ್ಠಿತ ಹೋಟೆಲೊಂದರಲ್ಲಿ ಮಹಿಳೆಗೆ ಮೂವರು ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ (Hubli) ಅಮರಗೋಳ ಬಳಿ ಇರುವ ಪ್ರತಿಷ್ಠಿತ ರಾಯಲ್ ರಿಟ್ಜ್ ಹೋಟೆಲ್ನಲ್ಲಿ (Royal Ridge Hotel) ಇದೇ ತಿಂಗಳ 2ನೇ ತಾರೀಖಿನಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲೈಂಗಿಕ ಕಿರುಕುಳ ಹಿನ್ನಲೆ ಮೂವರ ವಿರುದ್ದ ಹುಬ್ಬಳ್ಳಿಯ APMC ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ನಡೆದು 20 ದಿನಗಳು ಕಳೆದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು ಹೋಟೆಲ್ಗಳು ಎಷ್ಟು ಸೇಫ್ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಡಿಸೆಂಬರ್ 02ರಂದು ರಾಯಲ್ ರಿಟ್ಜ್ ಹೋಟೆಲ್ನಲ್ಲಿ ಪಾರ್ಟಿ ಇವೆಂಟ್ ಆಯೋಜನೆ ಮಾಡಲಾಗಿತ್ತು. ಪಾರ್ಟಿ ಆಯೋಜವೆ ವೇಳೆ ಮೂವರು ವ್ಯಕ್ತಿಗಳು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಕೈ ಸನ್ನೆ ಮಾಡಿ ಲೈಂಗಿಕವಾಗಿ ಕಿರುಕುಳ ನೀಡಿದ್ದರು. ಅಷ್ಟೇ ಅಲ್ಲದೆ ಇವೆಂಟ್ ಮಗಿದ ಮೇಲೆ ಕಾರ್ನಲ್ಲಿ ಮಹಿಳೆಯನ್ನು ಹಿಂಬಾಲಿಸಿದ್ದರು. ಲೈಂಗಿಕ ಕಿರಕುಳ ನೀಡಿದ ಅಜಯ್ ಕಲಾಲ್, ಸಲೀಮ್ ಬ್ಯಾಕೋಡ್, ಶಿವರಾಜ್ ಯಾದಗಿರಿ ವಿರುದ್ದ ಹುಬ್ಬಳ್ಳಿಯ APMC ಠಾಣೆಯಲ್ಲಿ ದೂರು ದಾಖಲಾಗಿದೆ. IPC -1860, 354/A, 354(D)34, 323 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಹೊಸ ವರ್ಷ 2024ಕ್ಕೆ ಜಿಯೋದಿಂದ ಬಂಪರ್ ಆಫರ್: ಪ್ರಿಪೇಯ್ಡ್ ಬಳಕೆದಾರರು ಫುಲ್ ಖುಷ್
ಊರಿಗೆ ಹೋಗುವ ವಿಚಾರಕ್ಕೆ ದಂಪತಿ ಜಗಳ, ಪತ್ನಿ ಆತ್ಮಹತ್ಯೆ
ಊರಿಗೆ ಹೋಗೋ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾವಿದ್ದು ಕೋಪಗೊಂಡ ಪತ್ನಿ ಆತ್ಮಹತ್ಯೆ ಶರಣಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಸರಣಿ ರಜೆಗಳಿವೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿರೋರು ಊರುಗಳತ್ತ ಹೋಗ್ತಿದ್ದಾರೆ. ಹೀಗೆ ಊರಿಗೆ ತೆರಳುವ ವಿಚಾರಕ್ಕೆ ದಂಪತಿ ನಡುವೆ ಕಲಹ ಉಂಟಾಗಿ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಘಟನೆ ನಡೆದಿದೆ. ಹನ್ನೊಂದು ತಿಂಗಳ ಗಂಡು ಮಗುವನ್ನು ಬಿಟ್ಟು ಪವಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಂದು ಸಂಜೆ ಪವಿತ್ರಾ ಮಾವನ ಮಗಳ ಆರಕ್ಷತೆ ಕಾರ್ಯಕ್ರಮ ಇತ್ತು. 3 ದಿನ ರಜೆ ಹಿನ್ನೆಲೆ ಹುಳಿಯಾರಿಗೆ ಹೋಗಿ ಬರಲು ತನ್ನ ಪತಿಗೆ ಪವಿತ್ರ ಹೇಳಿದ್ದಳು. ಪತ್ನಿ ಮಾತು ನಿರಾಕರಿಸಿದ ಪತಿ ತನ್ನೂರು ಹಿರಿಯೂರಿಗೆ ಹೊಗುತ್ತೇನೆಂದು ಹೇಳಿದ್ದ. ಪತಿ, ಮಗು ಮನೆಯಿಂದ ಹೊರ ಹೋಗುತ್ತಲೇ ಪತ್ನಿ ಪವಿತ್ರಾ ನೇಣಿಗೆ ಶರಣಾಗಿದ್ದಾಳೆ. ಚೇತನ್ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:46 pm, Sun, 24 December 23