ಕಾರ್ಕಳದ ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದಾಳೆ, ಹೇಳಿಕೆ ಇನ್ನೂ ದಾಖಲಿಸಿಕೊಂಡಿಲ್ಲ: ಐಜಿ, ಪಶ್ಚಿಮ ವಲಯ

|

Updated on: Aug 24, 2024 | 7:08 PM

ಡ್ರಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಲ್ಲ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಕೆಲ ತಿಂಗಳುಗಳ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡುವಂತೆ ತಾಕೀತು ಮಾಡಿದ್ದರು. ಆದರೆ ಮಾದಕ ವಸ್ತುಗಳು ಯುವಕರು ಕೈಗೆ ಸಿಗುತ್ತಲೇ ಇವೆ. ಸರ್ಕಾರ ಮತ್ತು ಪೊಲೀಸ್ ಜನರನ್ನು ಇಂಪ್ರೆಸ್ ಮಾಡಲು ಹೇಳಿಕೆಗಳನ್ನು ನೀಡಿದರೆ ಸಾಲದು.

ಉಡುಪಿ: ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ಹೆಚ್ಚುವರಿ ಎಸ್ ಪಿ ಸಿದ್ದಲಿಂಗಪ್ಪ ಮತ್ತು ಡಿವೈಎಸ್​ಪಿ ಅರವಿಂದ್ ಕಲ್ಗುಜ್ಜಿ ಅವರಿಂದ ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣದ ಮಾಹಿತಿ ಕಲೆ ಹಾಕಿದ ನಂತರ ಉಡುಪಿಯಲ್ಲಿ ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಪಶ್ಚಿಮ ವಲಯ ಐಜಿ ಅಮಿತ್ ಸಿಂಗ್, ಪ್ರಕರಣದ ಸಮಗ್ರ ತನಿಖೆಯನ್ನು ಪೋಲೀಸರು ನಡೆಸುತ್ತಿದ್ದಾರೆ ಮತ್ತು ಈಗಾಗಲೇ ಪ್ರಮುಖ ಆರೋಪಿ ಅಲ್ತಾಫ್ ಮತ್ತು ಅವನ ಒಬ್ಬ ಸ್ನೇಹಿತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಕೃತ್ಯಕ್ಕೆ ಬಳಸಿದ ಕಾರು ಮತ್ತು ಇನ್ನೊಂದು ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸಂತ್ರಸ್ತೆಗೆ ಲಿಕ್ಕರ್ ನಲ್ಲಿ ಡ್ರಗ್ಸ್ ಬೆರೆಸಿ ಕುಡಿಸಿ ಆಕೆ ಪ್ರಜ್ಞಾಹೀನಳಾದ ಬಳಿಕ ಅತ್ಯಾಚಾರವೆಸಲಾಗಿದೆ ಎಂದು ಅಮಿತ್ ಸಿಂಗ್ ಹೇಳಿದರು.

ಉಡುಪಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯು ಆಘಾತದಿಂದ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾಳೆ ಅದರೆ ಆಕೆಯಿಂದ ಇನ್ನೂ ಹೇಳಿಕೆಯನ್ನು ತಮ್ಮ ಪೊಲೀಸರು ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಅಲ್ತಾಫ್ ಒಬ್ಬನಿಂದಲೇ ಅತ್ಯಾಚಾರ ನಡೆಯಿತೇ ಅಥವಾ ಇದೊಂದು ಸಾಮೂಹಿಕ ಅತ್ಯಾಚಾರದ ಪ್ರಕರಣವೇ ಅಂತ ಸಂತ್ರಸ್ತೆ ಖಚಿತಪಡಿಸಬೇಕಿದೆ ಎಂದು ಅಮಿತ್ ಸಿಂಗ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾರ್ಕಳ ಅತ್ಯಾಚಾರ ಪ್ರಕರಣ; ಕ್ರಿಮಿನಲ್​ಗಳಿಗೆ ಪೊಲೀಸರ ಭಯ ಇಲ್ಲದಂತಾಗಿದೆ: ಸುನೀಲ ಕುಮಾರ, ಶಾಸಕ