ಆರ್ ಅಶೋಕ್ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಅವರು ರಾಜ್ಯ ಸರ್ಕಾರವು 26,000 ಅನಾಥ ಮಕ್ಕಳಿಗೆ ಏಳು ತಿಂಗಳ ಮಾಸಾಶನ ಮತ್ತು ಭಿಕ್ಷುಕರ ಪುನರ್ವಸತಿಗಾಗಿ 23.43 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದರು. ಸರ್ಕಾರ ಕರುಣೆ ರಹಿತವಾಗಿದೆ ಎಂದು ಟೀಕಿಸಿ, ಸಚಿವರು ಮತ್ತು ಗ್ಯಾರಂಟಿ ಸಮಿತಿಗಳಿಗೆ ಮೀಸಲಾದ ನಿಧಿಗಿಂತ ಇವರೇ ಹೆಚ್ಚು ಆದ್ಯತೆ ಎಂದು ಪ್ರತಿಪಾದಿಸಿದರು.
ಬೆಂಗಳೂರು, ಮಾರ್ಚ್ 10: ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬ ಮತ್ತು ಆದ್ಯತೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಭಿಕ್ಷಾಟನೆ ನಿರ್ಮೂಲನೆಗಾಗಿ ಸಂಗ್ರಹಿಸಲಾದ 3% ಸೆಸ್‌ನಿಂದ ಕೇಂದ್ರ ಪರಿಹಾರ ಸಮಿತಿಗೆ ನೀಡಬೇಕಾದ 23.43 ಕೋಟಿ ರೂ. ಬಾಕಿ ಉಳಿದಿದೆ ಎಂದು ಸದನದ ಗಮನ ಸೆಳೆದರು. ಅಲ್ಲದೆ, ಕೋವಿಡ್ ಅಥವಾ ಇತರೆ ದುರಂತಗಳಿಂದ ಪೋಷಕರನ್ನು ಕಳೆದುಕೊಂಡ 26 ಸಾವಿರ ಅನಾಥ ಮಕ್ಕಳಿಗೆ ಕಳೆದ ಏಳು ತಿಂಗಳಿಂದ ಮಾಸಾಶನ ಪಾವತಿಸಿಲ್ಲ. ಈ ಮಕ್ಕಳಿಗೆ ತಿಂಗಳಿಗೆ 4 ಸಾವಿರ ರೂ ಘೋಷಿಸಿದ್ದರೂ, ಸುಮಾರು 73-74 ಕೋಟಿ ರೂ. ಬಾಕಿ ಉಳಿದಿದೆ. ಸರ್ಕಾರಕ್ಕೆ ಕರುಣೆ ಇಲ್ಲ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Mar 10, 2026 06:46 PM
Loading...
Unable to load recommendations.
Follow Us
