Karnataka Assembly session: ರಾಜ್ಯದ ಹೃದಯವಾಗಿರುವ ಬೆಂಗಳೂರು ಹೃದ್ರೋಗಗಳಿಂದ ಬಳಲುತ್ತಿದೆ: ಎಸ್​ಆರ್ ವಿಶ್ವನಾಥ್

Updated on: Aug 20, 2025 | 7:59 PM

ಬೆಂಗಳೂರಿನ ಎಲ್ಲ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿರುವ ಕೆರೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ, ಆದರೆ ಅವರಿಗೆ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಕೇವಲ ₹10 ಕೋಟಿ ಅನುದಾನ ಮಾತ್ರ ಸಿಕ್ಕಿದೆ, ಇನ್ನೊಂದು 10 ಕೋಟಿ ಸಿಗುವ ಸಾಧ್ಯತೆ ಇದೆ, ತನ್ನ ಕ್ಷೇತ್ರ ಯಲಹಂಕದಲ್ಲಿ 54 ಪಾರ್ಕ್​ಗಳನ್ನು ಅಭಿವೃದ್ಧಿ ಮಾಡಲಾಗಿತ್ತು, ಆದರೆ ಅನುದಾನ ಕೊರತೆಯಿಂದ ಅವೆಲ್ಲ ಹಾಳು ಬಿದ್ದಂತಾಗಿವೆ ಎಂದು ವಿಶ್ವನಾಥ್ ಹೇಳಿದರು.

ಬೆಂಗಳೂರು, ಆಗಸ್ಟ್ 20: ಸದನದಲ್ಲಿಂದು ಬೆಂಗಳೂರು ನಗರ ಅಭಿವೃದ್ಧಿ ಬಗ್ಗೆ ಮಾರ್ಮಿಕವಾಗಿ ಮಾತಾಡಿದ ಯಲಹಂಕದ ಬಿಜೆಪಿ ಶಾಸಕ ಎಸ್​ಆರ್ ವಿಶ್ವನಾಥ್ (SR Vishwanath), ಪೆರಿಫೆರಲ್ ರಸ್ತೆಯ ಅಗತ್ಯ ನಗರಕ್ಕೆ ಎಷ್ಟಿದೆ ಅನ್ನೋದನ್ನು ಅಂಕಿ ಅಂಶಗಳೊಂದಿಗೆ ವಿವರಿಸಿದರು. ಬೆಂಗಳೂರು ನಗರದಲ್ಲಿಂದು ಒಟ್ಟು 1.23 ಕೋಟಿ ವಾಹನಗಳಿವೆ ಅಂದರೆ ನಗರದಲ್ಲಿ ವಾಸವಾಗಿರುವ ಪ್ರತಿಯೊಬ್ಬ ವ್ಯಕ್ತಿ ಒಂದೊಂದು ವಾಹನ ಹೊಂದಿದ್ದಾನೆ ಎಂದು ಹೇಳಿದ ಅವರು ಇಡೀ ಕರ್ನಾಟಕದಲ್ಲಿ 49ಲಕ್ಷ ಕಾರುಗಳಿದ್ದರೆ ಬೆಂಗಳೂರು ನಗರ ಒಂದರಲ್ಲೇ 25 ಲಕ್ಷ ಕಾರುಗಳಿವೆ ಎಂದರು. ಬೆಂಗಳೂರು ರಾಜ್ಯದ ಹೃದಯವಿದ್ದಂತೆ, ಆದು ಸರಿಯಿದ್ದಾಗ ಮಾತ್ರ ದೇಹದ ಎಲ್ಲ ಭಾಗಗಳಿಗೆ ರಕ್ತವನ್ನು ಪಂಪ್ ಆಗುತ್ತದೆ, ಆದರೆ ಈ ಹೃದಯಕ್ಕೆ ಆ್ಯಂಜಿಯೋಪ್ಲಾಸ್ಟಿ ಮತ್ತು ಇತರ ಕಾಯಿಲೆಗಳು ಅಮರಿಕೊಂಡಿವೆ, ಒಂದು ನಗರ ಸುಂದರ ಅನಿಸಿಕೊಳ್ಳಬೇಕಾದರೆ ಅದರ ರಸ್ತೆಗಳು ಚೆನ್ನಾಗಿರಬೇಕು, ಆದರೆ ಬೆಂಗಳೂರಿನ ನಗರಗಳು ತೀರ ಹದಗೆಟ್ಟಿವೆ, ಇಲ್ಲಿನ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿಗಳು ಇದನ್ನು ಗಮನಿಸಬೇಕು ಎಂದು ವಿಶ್ವನಾಥ್ ಹೇಳಿದರು.

ಇದನ್ನೂ ಓದಿ:   Karnataka Assembly session; ಎಲ್ಲ ಮುಖ್ಯಮಂತ್ರಿಗಳು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ: ಯತ್ನಾಳ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ