ಅನುದಾನ ಕೇಳಿದ್ರೆ ಜಾತಿ ಯಾವುದು ಅಂದ್ರು: ಸಚಿವರ ವಿರುದ್ಧ ಜೆಡಿಎಸ್ ಶಾಸಕ ಗಂಭೀರ ಆರೋಪ
ಗ್ಯಾರಂಟಿ ಯೋಜನೆಗಳಿಂದ ಶಾಸಕರುಗಳಿಗೆ ಅನುದಾನ ಸಿಗುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮಾತ್ರ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದರ ನಡುವೆ ಜಾತಿ ನೋಡಿ ಸಚಿವರು ಅನುದಾನ ಕೊಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು, (ಆಗಸ್ಟ್ 20): ಗ್ಯಾರಂಟಿ ಯೋಜನೆಗಳಿಂದ ಶಾಸಕರುಗಳಿಗೆ ಅನುದಾನ ಸಿಗುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮಾತ್ರ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದರ ನಡುವೆ ಜಾತಿ ನೋಡಿ ಸಚಿವರು ಅನುದಾನ ಕೊಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಗಂಭೀರ ಆರೋಪ ಮಾಡಿದ್ದಾರೆ. ಸದದಲ್ಲಿಂದು ಅನುದಾನ ತಾರತಮ್ಯ ಬಗ್ಗೆ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು, ಜಾತಿ ನೋಡಿ ಸಚಿವರು ಅನುದಾನ ಕೊಡುತ್ತಾರೆಯೇ? ಯಾಕಂದ್ರೆ ನಾನು ಅನುದಾನ ಕೇಳಲು ನಮ್ಮ ತಂದೆಯವರ ಕಾಲಮಾನದ ಒಬ್ಬ ಸಚಿವರ ಹತ್ತಿರ ಹೋಗಿದ್ದೆ. ಆಗ ನೀನು ಯಾವ ಜಾತಿಯವ ಎಂದು ಕೇಳಿದ್ದಾರೆ ಎಂದು ಸದನದಲ್ಲಿ ಅಸಮಧಾನ ಹೊರ ಹಾಕಿದರು.
ಜಾತಿ ನೋಡಿ ಕೆಲಸ ಮಾಡುವುದಾದರೆ ಅಧಿಕಾರಿಗಳ ಹೇಗೆ ನೋಡ್ತಾರೆ. ಎಫ್ ಡಿಯಲ್ಲಿ ಫೈಲ್ ಗಳು ವಿಧಾನಸೌಧಕ್ಕಿಂತ ಎತ್ತರ ಬಿದ್ದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ . ಹೀಗಾಗಿ ಎಲ್ಲಾ ಶಾಸಕರಿಗೂ ಅನುದಾನದಲ್ಲಿ ತಾರತಮ್ಯ ಮಾಡಬೇಡಿ ಎಂದರು.

