ಬೆಳಗಾವಿ ಅಧಿವೇಶನ; ಬಿಜೆಪಿ ಒಂದು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲಿದೆ: ಬಿ ವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

|

Updated on: Dec 04, 2023 | 11:53 AM

Karnataka Assembly Winter Session 2023: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ್ ರಾಜ್ಯಗಳ ಅಸೆಂಬ್ಲಿ ಚುನಾವಣೆ ಫಲಿತಾಂಶಗಳು ಮುಂಬರುವ ಲೋಕ ಸಭಾ ಚುನಾವಣೆಗೆ ದಿಕ್ಸೂಚಿಯಾಗಿವೆ, ಬಿಜೆಪಿ ಈ ಚುನಾವಣೆಯನ್ನು ಗಂಬೀರವಾಗಿ ಪರಿಗಣಿಸಿದ್ದು ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೂಡಿ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಲಿದೆ ಎಂದು ಬಿವೈ ವಿಜೆಯೇಂದ್ರ ಹೇಳಿದರು.

ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕಾಗಿ (Karnataka Assembly Winter Session) ಬೆಳಗಾವಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿಮಾನ ನಿಲ್ದಾಣದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅಧಿವೇಶನದಲ್ಲಿ ಬಿಜೆಪಿ ಒಂದು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವ ಜೊತೆಗೆ ಜನ ಅದರಲ್ಲೂ ವಿಶೇಷವಾಗಿ ಬಡಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ಉತ್ತರ ಪಡೆಯುವುದಾಗಿ ಹೇಳಿದರು. ಪಂಚ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶಗಳ ಬಗ್ಗೆ ಮಾತಾಡಿದ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪೊಳ್ಳು ಗ್ಯಾರಂಟಿಗಳನ್ನು ನೀಡಿ ಗೆದ್ದ ಹಾಗೆಯೇ ಅದರ ನೇತೃತ್ವ ಇಂಡಿಯ ಮೈತ್ರಿಕೂಟ ದೇಶದ ಬೇರೆ ಭಾಗಗಳಲ್ಲೂ ಗ್ಯಾರಂಟಿಗಳ ಮಂತ್ರ ಪಠಿಸಿತು. ಆದರೆ, ಜನ ಅವಟ ಟೊಳ್ಳು ಗ್ಯಾರಂಟಿಗಳನ್ನು ನಂಬಲು ತಯಾರಿಲ್ಲ, ಅವರಿಗೆ ಬೇಕಿರುವುದು ದೇಶದ ರಕ್ಷಣೆ ಮತ್ತು ಅಭಿವೃದ್ಧಿಯ ಗ್ಯಾರಂಟಿ ಮತ್ತು ಅದನ್ನು ಕೇವಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ನೀಡಬಲ್ಲರು ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ