ವಿಧಾನಸಭೆಯಲ್ಲಿ ವಿಪಕ್ಷ ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
Karnataka Assembly: ವಿಧಾನಸಭೆಯಲ್ಲಿ ಬರಪೀಡಿತ ತಾಲೂಕುಗಳ ಚರ್ಚೆ ವೇಳೆ ಬಿಜೆಪಿ ಅಡ್ಡಿಪಡಿಸಿದ್ದರಿಂದ ಸಚಿವ ಶಿವಲಿಂಗೇಗೌಡ ಆಕ್ಷೇಪಾರ್ಹ ಪದಗಳನ್ನು ಬಳಸಿದ ಪ್ರಸಂಗ ನಡೆದಿದೆ. ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ವಿಪಕ್ಷಗಳ ಪ್ರತಿಭಟನೆ ಸಂಬಂಧ ತೀವ್ರ ವಾಗ್ದಾಳಿ ನಡೆಸಿದ ಶಿವಲಿಂಗೇಗೌಡರು, ಒಂದು ದಿನವಾದರೆ ಸರಿ. ವಾರಗಟ್ಟಲೆ ಸದನದಲ್ಲಿ ಪ್ರತಿಭಟನೆಯಾ ಎಂದು ತರಾಟೆಗೆ ಪಡೆದಿದ್ದಾರೆ.
ಬೆಂಗಳೂರು, ಆಗಸ್ಟ್ 20: ಕರ್ನಾಟಕ ವಿಧಾನಸಭೆಯಲ್ಲಿ ಬರಪೀಡಿತ ತಾಲೂಕುಗಳ ಘೋಷಣೆ ಕುರಿತ ಚರ್ಚೆ ನಡೆಯುತ್ತಿದ್ದಾಗ ವಿಪಕ್ಷ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಸಚಿವ ಶಿವಲಿಂಗೇಗೌಡ ಅವರು ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ ಪ್ರಸಂಗ ನಡೆದಿದೆ. ಗಲಾಟೆ ತೀವ್ರಗೊಂಡ ಪರಿಣಾಮ ಸದನವನ್ನು ಹದಿನೈದು ನಿಮಿಷಗಳ ಕಾಲ ಸ್ಪೀಕರ್ ಮುಂದೂಡಬೇಕಾಯಿತು. ವಿಪಕ್ಷಗಳು ಕಲಾಪದ ಸಮಯವನ್ನು ಹಾಳು ಮಾಡುತ್ತಿದ್ದು, ಬರ ಪರಿಹಾರ, ರೈತರ ಸಮಸ್ಯೆಗಳು ಮತ್ತು ನೀರಾವರಿ ಸೌಕರ್ಯಗಳ ಕುರಿತು ಚರ್ಚೆಗೆ ಅನುವು ಮಾಡಿಕೊಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Aug 20, 2026 06:21 PM
Loading...
Unable to load recommendations.
Follow Us
