ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ, ದಾವಣಗೆರೆಯಲ್ಲಿ ಗುಪ್ತ್​ ಗುಪ್ತ್​ ಸಭೆ

|

Updated on: Sep 29, 2024 | 2:46 PM

ಒಂದೆಡೆ ಆಡಳಿತರೂಢ ಕಾಂಗ್ರೆಸ್​ಗೆ ಮುಡಾ ಹಗರಣ ಸಂಕಷ್ಟ ಎದುರಾಗಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಹೌದು.. ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಹಠಾವೋ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿರೋಧಿ ಬಣದ ಶಾಸಕರು, ನಾಯಕರು ಗುಪ್ತ್​ ಗುಪ್ತ್​ ಸಭೆ ನಡೆಸುತ್ತಿದ್ದಾರೆ.

ದಾವಣಗೆರೆ, (ಸೆಪ್ಟೆಂಬರ್, 29): ಕರ್ನಾಟಕ ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಹಠಾವೋ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಿವೈ ವಿಜಯೇಂದ್ರ ವಿರೋಧಿ ಶಾಸಕರು ಹಾಗೂ ನಾಯರು ಪದೇ ಪದೇ ಪ್ರತ್ಯೇಕ ಸಭೆ ಮಾಡುತ್ತಲೇ ಇದ್ದಾರೆ. ಇತ್ತೀಚಗೆ ಬೆಳಗಾವಿಯಲ್ಲಿ ಸೀಕ್ರೆಟ್​ ಮೀಟಿಂಗ್ ನಡೆದಿತ್ತು, ಇದಾದ ಮೇಲೆ ಕುಮಾರ್ ಬಂಗಾರಪ್ಪ ಹಾಗೇ ಬಿಜೆಪಿ ಉಚ್ಚಾಟಿತ ನಾಯಕ ಕೆಎಸ್​ ಈಶ್ವರಪ್ಪ ನಿವಾಸದಲ್ಲಿ ರೆಬೆಲ್​ ನಾಯಕರು ಸಭೆ ನಡೆಸಿದ್ದಾರೆ. ಇದೀಗ ಇಂದು (ಸೆ.29) ದಾವಣಗೆರೆಯಲ್ಲಿ ಗುಪ್ತ್​ ಗುಪ್ತ್​ ಸಭೆ ನಡೆಸಿದ್ದಾರೆ. ದಾವಣಗೆರೆ ನಗರದ ಜಿಎಂಐಟಿ ಕಾಲೇಜ್ ಅತಿಥಿ ಗೃಹದಲ್ಲಿ ನಾಯಕರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಜಿಎಂ ಸಿದ್ದೇಶ್ವರ, ಹರಿಹರ ಬಿಜೆಪಿ ಶಾಸಕ ಬಿ ಪಿ ಹರೀಶ್ ಸೇರಿದಂತೆ ಇತರೆ ರೆಬೆಲ್ ನಾಯಕರು ಇದ್ದರು.

Follow us on