Siddaramaiah Press Conference Live: ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ, ಇಲ್ಲಿದೆ ನೇರ ಪ್ರಸಾರ
ಹತ್ತು ಹಲವು ಹೊಸ ಯೋಜನೆಗಳು.. ಅಭಿವೃದ್ಧಿಪೂರಕ ಅನುದಾನ.. ರಾಜ್ಯ ಸರ್ಕಾರ ಬರೋಬ್ಬರಿ 51 ಸಾವಿರ ಕೋಟಿ ಹಣವನ್ನ ಗ್ಯಾರಂಟಿಗೆ ಮೀಸಲಿಟ್ಟಿದೆ. ಇಂತಹ ಬಹುಗಾತ್ರದ ಮಹತ್ವದ ಯೋಜನೆಯ ಜೊತೆಜೊತೆಗೆ ಹತ್ತು ಹಲವು ಘೋಷಣೆಗಳನ್ನ ಮಾಡಿದೆ. ನೂತನ ಕಾಲೇಜುಗಳು, ಕಟ್ಟಡಗಳು, ಕಂಪನಿಗಳಿಗೆ ಸಹಕಾರ, ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿಯಲ್ಲಿ ರಾಜ್ಯವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಬಜೆಟ್ ಮಂಡಿಸಲಾಗಿದೆ. ಇನ್ನು ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದು, ಅದರ ನೇರಪ್ರಸಾರ ಇಲ್ಲಿದೆ.
ಬೆಂಗಳೂರು, (ಮಾರ್ಚ್ 07): ಮುಖ್ಯಮಮತ್ರಿ ಸಿದ್ದರಾಮಯ್ಯನವರು ಇಂದು (ಮಾರ್ಚ್ 07) ತಮ್ಮ 16ನೇ ಬಜೆಟ್ ಮಂಡಿಸಿದ್ದಾರೆ. 2025ನೇ ಸಾಲಿನ ಕರ್ನಾಟಕ ಬಜೆಟ್ನ ಗಾತ್ರ ಬರೋಬ್ಬರಿ 4 ಲಕ್ಷ ಕೋಟಿ. ಕಳೆದ ವರ್ಷ 3 ಲಕ್ಷ 71 ಸಾವಿರದ 383 ಕೋಟಿ ಬಜೆಟ್ ಗಾತ್ರವಿತ್ತು. ಈ ಬಾರಿ ಈ ಅಂಕಿ 4 ಲಕ್ಷ ಕೋಟಿ ದಾಟಿದೆ. ಅಂದ್ರೆ 4 ಲಕ್ಷ 9 ಸಾವಿರದ 549 ಕೋಟಿ ರೂಪಾಯಿಯ ದಾಖಲೆಯ ಬಜೆಟ್ ಇದಾಗಿದೆ. ಇನ್ನು ಈ ಬಜೆಟ್ ಬಗ್ಗೆ ವಿಪಕ್ಷ ನಾಯಕರು ನಾನಾ ರೀತಿಯಲ್ಲಿ ಟೀಕಿ ವ್ಯಂಗ್ಯ ಮಾಡುತ್ತಿದ್ದಾರೆ. ಈ ಮಧ್ಯ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದು, ಅದರ ನೇರಪ್ರಸಾರ ಇಲ್ಲಿದೆ ನೋಡಿ.
