ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ಶಿವಶಂಕರಪ್ಪ ವಾಗ್ದಾಳಿ

Updated By: ವಿವೇಕ ಬಿರಾದಾರ

Updated on: Apr 15, 2025 | 10:16 PM

ಕರ್ನಾಟಕ ಸರ್ಕಾರ ಜಾತಿಗಣತಿ ವರದಿ ಬಿಡುಗಡೆಗೆ ಮುಂದಾಗಿರುವುದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರೋಧಿಸಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ನಿರ್ಲಕ್ಷಿಸಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಮಹಾಸಭಾ ಈಗಾಗಲೇ ಸಭೆ ನಡೆಸಿದೆ ಮತ್ತು ಹೋರಾಟಕ್ಕೆ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ದಾವಣಗೆರೆ, ಏಪ್ರಿಲ್​ 15: ಜಾತಿಗಣತಿ ವರದಿ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ಮಾಡಿದ್ದಾರೆ. “ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ ಹಾಗೂ ಒಕ್ಕಲಿಗರನ್ನು ಎದುರಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತಾ? ಅವರು ಸುಮ್ಮನೇ ವರದಿ ಬಿಡುಗಡೆ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಫಸ್ಟ್ ಲಿಂಗಾಯತರು, ಸೆಕೆಂಡ್ ಒಕ್ಕಲಿಗರು ಇದ್ದಾರೆ. ಅವರು ನಮ್ಮನ್ನು ಎದುರಾಕಿಕೊಂಡು ರಾಜ್ಯಾಭಾರ ಮಾಡಲು ಆಗುತ್ತಾ? ಲಿಂಗಾಯತರು, ಒಕ್ಕಲಿಗರು ಇಬ್ಬರು ಸೇರಿ ಹೋರಾಟ ಮಾಡುತ್ತೇವೆ. ಈ ಬಗ್ಗೆ ವೀರಶೈವ ಲಿಂಗಾಯತ ಮಹಾಸಭಾ ಈಗಾಗಲೇ ಸಭೆ ನಡೆಸಿದೆ ಎಂದು ಹೇಳಿದರು.