ಯದುವಂಶದ ಯದುವೀರ್​ರನ್ನು ಮೈಸೂರು ಸ್ಯಾಂಡಲ್ ಸೋಪ್​ಗೆ ರಾಯಭಾರಿಯಾಗಿ ಪರಿಗಣಿಸಬಹುದು: ಹೆಚ್ ವಿಶ್ವನಾಥ್

Updated on: May 26, 2025 | 1:52 PM

ನೆರೆದಿದ್ದ ಪತ್ರಕರ್ತರಲ್ಲಿ ಒಬ್ಬರು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮೈಸೂರು ಸ್ಯಾಂಡಲ್ ಸೋಪಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತೇನೆ ಅಂದಿದ್ದಾರೆ ಅಂದಾಗ, ಗಹಿಗಹಿಸಿ ನಕ್ಕ ವಿಶ್ವನಾಥ್, ಅವರು ತಮ್ಮ ಟೋಪಿ ತೆಗೆದುಬಂದರೆ ಮಾಡೆಲ್ಲಿಂಗ್​ಗೆ ಪರಿಗಣಿಸಬಹುದು ಎಂದು ಹೇಳಿದರು. ತಮನ್ನಾ ಭಾಟಿಯಾರನ್ನು ಆಯ್ಕೆ ಮಾಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಮೈಸೂರು, ಮೇ 26: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಇಂದು ಮತ್ತೊಮ್ಮೆ ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದರು. ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಯು ತನ್ನ ಉತ್ಪನ್ನ ಮೈಸೂರು ಸ್ಯಾಂಡಲ್​ ಸೋಪ್​ಗೆ ಖ್ಯಾತ ಚಿತ್ರನಟಿ ತಮನ್ನಾ ಭಾಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರೋದು ಚರ್ಚೆಯ ವಿಷಯವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡಿದ ಶಾಸಕ, ಯದುವಂಶದ ಪ್ರತಿನಿಧಿ ಮತ್ತು ಸಂಸದ ಯದುವೀರ್ ಕೃಷ್ಣದತ್ ಒಡೆಯರ್ ಅವರನ್ನು ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿಯನ್ನಾಗಿ ಮಾಡೋದು ಲೇಸು, ಯದುವಂಶದ ಬಗ್ಗೆ ಜನರಲ್ಲಿ ಈಗಲೂ ಆದರಾಭಿಮಾನವಿದೆ ಎಂದು ಹೇಳಿದರು.

ಇದನ್ನೂ ಓದಿ:  ತಮನ್ನಾ ಭಾಟಿಯಾ, ವಿಜಯ್ ವರ್ಮಾ ಬ್ರೇಕಪ್; ಇನ್ಮುಂದೆ ಕೇವಲ ಫ್ರೆಂಡ್ಸ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ