18 ಸಾವಿರ ಕೋಟಿ ರೂ. ವೆಚ್ಚದ ಬೆಂಗಳೂರಿನ ಟನಲ್ ಡಿಪಿಆರ್​ ನಲ್ಲಿ ಲೋಪದೋಷ ಪತ್ತೆ: ಏನದು?

Updated on: Oct 14, 2025 | 2:48 PM

ಕಾಂಗ್ರೆಸ್ ಸರ್ಕಾರದ ಕನಸಿನ ಕೂಸು ಸುರಂಗ ರಸ್ತೆ ( Bengaluru Tunnel Road) ನಿರ್ಮಾಣ ಮಾಡಲು ಸಿದ್ಧತೆ ಮಾಡಿದ ಸಮಗ್ರ ಯೋಜನಾ ವರದಿಯಲ್ಲಿ (DPR) ಲೋಪದೋಷಗಳಿರುವ ವಿಚಾರ ಈಗ ಬೆಳಕಿಗೆ ಬಂದಿದೆ.ಸಂಚಾರ ದಟ್ಟಣೆ ತಡೆಗಟ್ಟಲು 18 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಹೆಬ್ಬಾಳದಿಂದ  ಸಿಲ್ಕ್ ಬೋರ್ಡ್‌ವರೆಗೆ  19 ಕಿ.ಮೀ ಉದ್ದದ ಸುರಂಗ ಮಾರ್ಗ (Hebbal- Silk Board Tunnel) ನಿರ್ಮಾಣಕ್ಕೆ ಡಿಪಿಆರ್‌ ಮಾಡಲಾಗಿದೆ. ಆದ್ರೆ, ಈ ಡಿಪಿಆರ್​ ನಲ್ಲಿ ಲೋಪದೋಷವಾಗಿರುವುದನ್ನು ತಜ್ಞರ ಸಮಿತಿ ಪತ್ತೆಮಾಡಿದೆ.

ಬೆಂಗಳೂರು, (ಅಕ್ಟೋಬರ್ 14): ಕಾಂಗ್ರೆಸ್ ಸರ್ಕಾರದ ಕನಸಿನ ಕೂಸು ಸುರಂಗ ರಸ್ತೆ ( Bengaluru Tunnel Road) ನಿರ್ಮಾಣ ಮಾಡಲು ಸಿದ್ಧತೆ ಮಾಡಿದ ಸಮಗ್ರ ಯೋಜನಾ ವರದಿಯಲ್ಲಿ (DPR) ಲೋಪದೋಷಗಳಿರುವ ವಿಚಾರ ಈಗ ಬೆಳಕಿಗೆ ಬಂದಿದೆ.ಸಂಚಾರ ದಟ್ಟಣೆ ತಡೆಗಟ್ಟಲು 18 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಹೆಬ್ಬಾಳದಿಂದ  ಸಿಲ್ಕ್ ಬೋರ್ಡ್‌ವರೆಗೆ  19 ಕಿ.ಮೀ ಉದ್ದದ ಸುರಂಗ ಮಾರ್ಗ (Hebbal- Silk Board Tunnel) ನಿರ್ಮಾಣಕ್ಕೆ ಡಿಪಿಆರ್‌ ಮಾಡಲಾಗಿದೆ. ಆದ್ರೆ, ಈ ಡಿಪಿಆರ್​ ನಲ್ಲಿ ಲೋಪದೋಷವಾಗಿರುವುದನ್ನು ತಜ್ಞರ ಸಮಿತಿ ಪತ್ತೆಮಾಡಿದೆ.

ಹೌದು.. ಈ ಟನಲ್‌ ರಸ್ತೆಗೆ ವಿವಾದ ಜೋರಾಗುತ್ತಿದ್ದಂತೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಕಾರ್ಯನಿರ್ವಾಹಕ ನಿರ್ದೇಶಕ (ಸಿವಿಲ್) ಸಿದ್ದನಗೌಡ ಹೆಗರಡ್ಡಿ ನೇತೃತ್ವದಲ್ಲಿ ಐವರ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಡಿಪಿಆರ್‌ ಅಧ್ಯಯನ ಮಾಡಿ ಹಲವು ದೋಷಗಳನ್ನು ಎತ್ತಿ ತೋರಿಸಿದೆ.