ರಾಜ್ಯದಲ್ಲಿ ಒಟ್ಟು 47 ಸಕ್ರಿಯ ಕೋವಿಡ್ ಪ್ರಕರಣಗಳಿವೆ, ಸೋಂಕು ಗಂಭೀರ ಪ್ರಮಾಣದಲ್ಲಿಲ್ಲ: ದಿನೇಶ್ ಗುಂಡೂರಾವ್
ಮಳೆಗಾಲಕ್ಕೂ ಮತ್ತು ಕೊರೋನಾ ಸೋಂಕಿಗೂ ಸಂಬಂಧವಿಲ್ಲ ಎಂದು ದಿನೇಶ್ ಗುಂಡೂರಾವ್ ಮಳೆಗಾಲದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತವೆ ಎಂದು ಹೇಳಿದರು. ಆರ್ಟಿಪಿಸಿಆರ್ ಟೆಸ್ಟ್ ಕಿಟ್ ಗಳನ್ನು ಎಲ್ಲ ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಕಾಲೇಜುಗಳಿಗೆ ಕಳಿಸುವ ವ್ಯವಸ್ಥೆ ಶೀಘ್ರದಲ್ಲೇ ಮಾಡಲಾಗುತ್ತದೆ, ಸಾಮೂಹಿಕ ಟೆಸ್ಟ್ಗಳ ಅವಶ್ಯಕತೆ ಇನ್ನೂ ತಲೆದೋರಿಲ್ಲ ಎಂದು ದಿನೇಶ್ ಹೇಳಿದರು.
ಬೆಂಗಳೂರು, ಮೇ 26: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ರಾಜ್ಯದಲ್ಲಿ ಕೊರೋನಾ ಸೋಂಕಿನ ಬಗ್ಗೆ ಅಪ್ಡೇಟ್ಗಳನ್ನು ನೀಡಿದರು. ರಾಜ್ಯದಲ್ಲಿ ಒಟ್ಟು 47 ಸಕ್ರಿಯ ಸೋಂಕಿತರಿದ್ದಾರೆ, ಆದರೆ ಯಾರೂ ಆಕ್ಸಿಜನ್ ಮೇಲಾಗಲೀ, ವೆಂಟಿಲೇಟರ್ ಮೇಲಾಗಲಿ ಇಲ್ಲ, ಗಂಭೀರ ಸ್ವರೂಪದ ಸೋಂಕಿನಿಂದ ಯಾರೂ ಬಳಲುತ್ತಿಲ್ಲ ಅನ್ನೋದು ಗೊತ್ತಾಗಿದೆ ಮತ್ತ್ತು ಸೋಂಕಿತರನ್ನು ಅವರವರ ಮನೆಯಲ್ಲಿ ಐಸೋಲೇಷನ್ನಲ್ಲಿ ಇಡಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಾಯಂಕಾಲ ತಜ್ಞರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದಾರೆ, ಎಲ್ಲರೂ ಕುಳಿತು ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸಚಿವ ಹೇಳಿದರು.
ಇದನ್ನೂ ಓದಿ: ಕೊರೋನಾ ತರ ಮತ್ತೊಂದು ರೋಗದ ಭೀತಿ: ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ