Loading video

ಬಜೆಟ್​ನಲ್ಲಿ ಬೇಡಿಕೆ ಈಡೇರಿಸುವಂತೆ 4 ಸಾರಿಗೆ ನಿಗಮಗಳು ಒತ್ತಾಯ: ಸರ್ಕಾರಕ್ಕೆ ಮಾರ್ಚ್​​​ 22ರ ಡೆಡ್​​ಲೈನ್​​

| Updated By: ಗಂಗಾಧರ​ ಬ. ಸಾಬೋಜಿ

Updated on: Mar 06, 2025 | 5:58 PM

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟವು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಅಂತಿಮ ಗಡುವು ನೀಡಿದೆ. ಮಾರ್ಚ್ 22ರೊಳಗೆ ಬೇಡಿಕೆ ಈಡೇರದಿದ್ದರೆ ಮಾರ್ಚ್ 25ರಿಂದ ಬಸ್ ಸಂಚಾರ ಬಂದ್ ಮಾಡುವುದಾಗಿ ಎಚ್ಚರಿಸಿದೆ. ಮುಖ್ಯ ಬೇಡಿಕೆಗಳಲ್ಲಿ 7ನೇ ವೇತನ ಆಯೋಗದ ಅನುಷ್ಠಾನ, ಹಿಂಬಾಕಿ ವೇತನ ಪಾವತಿ, ಮತ್ತು ವಜಾ ಮಾಡಿದ ನೌಕರರ ಪುನರ್ ನೇಮಕ ಸೇರಿವೆ.

ಬೆಂಗಳೂರು, ಮಾರ್ಚ್​​ 06: ನಾಳೆ ಸಿಎಂ ಸಿದ್ದರಾಮಯ್ಯ ಬಜೆಟ್ (Budget) ಮಂಡನೆ ಹಿನ್ನೆಲೆ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ 4 ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ಮಾರ್ಚ್​​​ 22ರ ಡೆಡ್​​ಲೈನ್​​ ನೀಡಿದೆ. ನಮ್ಮ ಬೇಡಿಕೆ ಈಡೇರಿಸದಿದ್ರೆ ಬಸ್​ ಸಂಚಾರ ಬಂದ್​ ಮಾಡುವುದಾಗಿ ಎಚ್ಚರಿಕೆ ನೀಡಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.