ಸಿಎಂ ಕುರ್ಚಿ ಕದನದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಪ್ರವೇಶ: ಕಾಂಗ್ರೆಸ್​​ಗೆ ಸಲಹೆ ಜತೆಗೆ ಪರೋಕ್ಷ ಎಚ್ಚರಿಕೆ

Updated on: Nov 26, 2025 | 9:50 PM

ಸಿಎಂ ಕುರ್ಚಿಗಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪಟ್ಟು ಹಿಡಿದಿದ್ದಾರೆ. ಇದರಿಂದ ಕರ್ನಾಟಕ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಇನ್ನು ಡಿಕೆ ಶಿವಕುಮಾರ್ ಹೈಕಮಾಂಡ್ ಗಮನಸೆಳೆಲು ತಮ್ಮ ಬಣದ ಶಾಸಕರನ್ನು ದೆಹಲಿಗೆ ಕಳುಹಿಸಿದ್ದರು. ಇದೀಗ ಈ ಕುರ್ಚಿ ಕದನದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯ ಪ್ರವೇಶವಾಗಿದ್ದು, ಡಿಕೆ ಶಿವಕುಮಾರ್‌ಮುಖ್ಯಮಂತ್ರಿಯಾಗಬೇಕು ಎಂದಿದ್ದಾರೆ.

ಹಾಸನ, (ನವೆಂಬರ್ 26): ಸಿಎಂ ಕುರ್ಚಿಗಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪಟ್ಟು ಹಿಡಿದಿದ್ದಾರೆ. ಇದರಿಂದ ಕರ್ನಾಟಕ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಇನ್ನು ಡಿಕೆ ಶಿವಕುಮಾರ್ ಹೈಕಮಾಂಡ್ ಗಮನಸೆಳೆಲು ತಮ್ಮ ಬಣದ ಶಾಸಕರನ್ನು ದೆಹಲಿಗೆ ಕಳುಹಿಸಿದ್ದರು. ಇದೀಗ ಈ ಕುರ್ಚಿ ಕದನದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯ ಪ್ರವೇಶವಾಗಿದ್ದು, ಡಿಕೆ ಶಿವಕುಮಾರ್‌ಮುಖ್ಯಮಂತ್ರಿಯಾಗಬೇಕು ಎಂದಿದ್ದಾರೆ.

ಹಾಸನ ಹಾಸನ‌ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕುಂದೂರಿನಲ್ಲಿ ಮಾತನಾಡಿದ ಶ್ರೀಗಳು, ಸಿಎಂ ಆಗುವ ಸಂಬಂಧ ಡಿಕೆ ನಮ್ಮ ಜತೆ ಮಾತಾಡಿಲ್ಲ. ಸಾವಿರಾರು ಭಕ್ತರು ನಮಗೆ ಕರೆ ಮಾಡಿ ಕೇಳುತ್ತಿದ್ದಾರೆ. ನಮ್ಮವರೊಬ್ಬರು ಸಿಎಂ ಆಗುತ್ತಾರೆಂದು ಬೆಂಬಲ ನೀಡಿದ್ವಿ. ಅವರು ಹೇಳಿದ ಪ್ರಕಾರ ಎರಡುವರೆ ವರ್ಷಗಳ ಬಳಿಕ ಡಿಕೆ ಅವರಿಗೆ ಅವಕಾಶ ಸಿಗುತ್ತೆಂಬ ಆಶಾಭಾವನೆ ಇತ್ತು. ಆದರೆ ಅದು ಆಗುವ ಹಾಗೆ ಕಾಣುತ್ತಿಲ್ಲ ಎಂದು ಬೇಸರ ಹೊರಹಾಕಿದರು.

ಡಿಕೆ ಸಿಎಂ ಆಗದೆ ಹೋದರೆ ಭಕ್ತರಿಗೆ ಬೇಸರ ಆಗಲಿದೆ. ಸಾವಿರಾರು ಭಕ್ತರು ನಮ್ಮನ್ನ ಸಂಪರ್ಕ ಮಾಡುತ್ತಿದ್ದಾರೆ. ಈ ಬೆಳವಣಿಗೆ ರಾಜ್ಯದ ಅಭಿವೃದ್ಧಿಗೆ ಕ್ಷೇಮಕರ ಅಲ್ಲ. ಕಾಂಗ್ರೆಸ್​​ ಸರಿಯಾದ ಸ್ಪಷ್ಟತೆಯನ್ನ ಕೊಟ್ಟು ಮಾಡಬೇಕು. ಪಕ್ಷದ ಶಿಸ್ತಿನ ಸಿಪಾಯಿಗಾಗಿ ಡಿಕೆ ಅವರು ದುಡಿದಿದ್ದಾರೆ. ಹೀಗಾಗಿಅ ಅವರಿಗೂ ಒಂದು ಅವಕಾಶ ನೀಡ್ಬೇಕು. ಇದು ಎಲ್ಲರ ಒಕ್ಕೊರಲ ಕೂಗು. ಉಳಿದ ಎರಡುವರೆ ವರ್ಷ ಡಿಕೆ ಅವರಿಗೆ ಕೊಡಬೇಕು ಎಂದು ಆಗ್ರಹಿಸಿದರು.

Published on: Nov 26, 2025 08:50 PM